ಫೇರ್‌ ಪ್ರಾಕ್ಟೀಸ್‌ ಕೋಡ್‌

ಮಹೀಂದ್ರಾ ಮತ್ತು ಮಹೀಂದ್ರಾ ಫೈನಾನ್ಶಿಯಲ್ ಸರ್ವೀಸಸ್‌ ಲಿಮಿಟೆಡ್‌ (“ದಿ ಕಂಪನಿ ಅಥವಾ ಎಮ್‌ಎಮ್‌ಎಫ್‌ಎಸ್‌ಎಲ್‌”) ಎನ್ನುವುದು ಒಂದು ನಾನ್‌-ಬ್ಯಾಂಕಿಂಗ್‌ ಫೈನಾನ್ಸ್‌ ಡಿಪಾಸಿಟ್‌ ತೆಗೆದುಕೊಳ್ಳುವ ಕಂಪನಿಯಾಗಿದ್ದು ಅದನ್ನು ರಿಸರ್ವ್‌ ಬ್ಯಾಂಕ್‌ ಇಂಡಿಯಾ (“ಆರ್‌ಬಿಐ”)ನಲ್ಲಿ ನೋಂದಣಿಯಾಗಿದೆ ಹಾಗೂ ಪ್ರಸ್ತುತದಲ್ಲಿ ಅದು ತನ್ನ ಹಲವಾರು ರೀತಿಯ ಗ್ರಾಹಕರಿಗೆ ವಿವಿಧ ರೀತಿಯ ಸಾಲಗಳಾದ ವಾಹನ ಸಾಲಗಳು, ಸಲಕರಣೆಗೆ ಹಣಕಾಸು ಸಾಲ, ಎಸ್‌ಎಮ್‌ಇ ಸಾಲಗಳು, ಗೃಹೋಪಯೋಗಿ ವಸ್ತುಗಳಿಗೆ ಸಾಲಗಳು, ವೈಯುಕ್ತಿಕ ಸಾಲಗಳು ಇತ್ಯಾದಿ ವಿಭಿನ್ನ ರೀತಿಯ ಸಾಲಗಳನ್ನು ನೀಡುವ ವ್ಯವಹಾರವನ್ನು ನಡೆಸುತ್ತಿದೆ. ಇಂತಹ ಸಾಲಗಳನ್ನು ನೀಡುವ ಸೌಲಭ್ಯವನ್ನು ಅದು ತನ್ನ ವಿಭಿನ್ನ ರೀತಿಯ ಗ್ರಾಹಕರಿಗೆ ಅಂದರೆ ವೈಯುಕ್ತಿಕವಾದ ಸಾಲಗಳು, ಏಕ ಮಾಲೀಕತ್ತ್ವದ ಸಂಸ್ಥೆಗಳಿಗೆ, ಪಾಲುದಾರ ಸಂಸ್ಥೆಗಳಿಗೆ, ಕಂಪನಿಗಳಿಗೆ ಮತ್ತು ಇತರ ಕಾನೂನು ಬದ್ದ ಘಟಕಗಳಿಗೆ ಒದಗಿಸುತ್ತಿದೆ.

ಫೇರ್‌ ಪ್ರಾಕ್ಟೀಸ್‌ ಕೋಡ್‌ (“ದಿ ಕೋಡ್‌”) ಎನ್ನುವುದು ಒಂದು ನ್ಯಾಯುಯುವಾದ ಅಭ್ಯಾಸಗಳು/ನೀತಿಸಂಹಿತೆಗಳಾಗಿದ್ದು ಅವುಗಳ ತಮ್ಮ ಗ್ರಾಹಕರ ಜೊತೆಯಲ್ಲಿ ನಡೆದುಕೊಳ್ಳುವ ಬಗೆ ಹೇಗಿರಬೇಕೆಂಬುದನ್ನು ತಿಳಿಸುತ್ತದೆ. ಈ ನೀತಿ ಸಂಹಿತೆಯು ಗ್ರಾಹಕರಿಗೆ ತಮಗೆ ಒದಗಿಸಲಾದ ಹಣಕಾಸು ಸೌಲಭ್ಯಗಳು ಮತ್ತು ಅನುಕೂಲಗಳು ಯಾವ ಬಗೆಯದಾಗಿರುವುದೆಂಬುದನ್ನು ತಿಳಿಸುವುದರಿಂದ ಅವರು ತಮ್ಮ ಹಣಕಾಸಿಗೆ ಸಂಬಂಧಿಸಿದಂತೆ ಮಾಹಿತಿಯುಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಹೀಗಾಗಿ ಅವರು ಕಂಪನಿಯು ಯಾವ ರೀತಿಯ ಸಾಲಕ್ಕೆ ಅನುಮೋದನೆ ನೀಡಿ ಸಾಲ ವಿತರಿಸುವುದೋ ಅಂತಹ ಸಾಲಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.

ಈ ಕೋಡ್‌ ಕಂಪನಿಯು ನೀಡುವ ಎಲ್ಲಾ ವರ್ಗದ ಉತ್ಪನ್ನಗಳಿಗೂ ಮತ್ತು ಸೇವೆಗಳಿಗೂ ಸಹ ಅನ್ವಯವಾಗುವುದು. (ಪ್ರಸ್ತುತ ನೀಡುತ್ತಿರುವ ಸಾಲಗಳಿಗೆ ಮತ್ತು ಭವಿಷ್ಯದಲ್ಲಿ ಪರಿಚಯಿಸಬಹುದಾದ ಇತರ ಸಾಲಗಳನ್ನು ಸೇರಿದಂತೆ)


ಕೋಡ್‌ನ ಉದ್ದೇಶ

ಈ ಕೋಡ್‌ ಅಭಿವೃದ್ದಿ ಪಡಿಸಲಾದ ಉದ್ದೇಶವು ಈ ರೀತಿಯಾಗಿದೆ:

 • ಗ್ರಾಹಕರೊಡನೇ ವ್ಯವಹರಿಸುವಾಗ ಕನಿಷ್ಠ ರೀತಿಯ ಮಾನದಂಡವನ್ನು ನಿಶ್ಚಯಗೊಳಿಸಿ ಒಳ್ಳೆಯ ಪ್ರೋತ್ಸಾಹ, ಸಮಂಜಸವಾದ ಮತ್ತು ವಿಶ್ವಸನೀಯವಾದ ಅಭ್ಯಾಸಗಳನ್ನು ಒದಗಿಸುವುದು.
 • ಕಂಪನಿಯು ಒದಗಿಸುವ ಸೇವೆಯಲ್ಲಿ ಯಥೋಚಿತವಾದ ನಿರೀಕ್ಷೆಯನ್ನು ಇರಿಸಿಕೊಳ್ಳಲು ಉತ್ತಮ ತಿಳುವಳಿಕೆಯನ್ನು ಒದಗಿಸುವುದರ ಜೊತೆಗೆ ಪಾರದರ್ಶಕತೆಯನ್ನು ಹೆಚ್ಚಿಸುವುದು.
 • ಗ್ರಾಹಕರು ಕಂಪನಿಯ ಜೊತೆಗೆ ಉಚಿತವಾದ ಮತ್ತು ಹಾರ್ದಿಕವಾದ ಸಂಬಂಧವನ್ನು ಬೆಳಿಸಿಕೊಳ್ಳಲು ಪ್ರೋತ್ಸಾಹ ನೀಡುವುದು.

ಪ್ರಮುಖ ಬಧ್ದತೆಗಳು

ನಮ್ಮ ಎಲ್ಲಾ ಗ್ರಾಹಕರೊಡನೆ ಪರಿಣಾಮಕಾರಿಯಾಗಿ, ಯಥೋಚಿತವಾಗಿ ಮತ್ತು ದಕ್ಷತೆಯಿಂದ ವ್ಯವಹಾರ ನಡೆಸುವುದು:

 • ಕಂಪನಿಯ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ನಿರ್ದಿಷ್ಟಗೊಳಿಸಲಾದ ಎಲ್ಲಾ ಮಾನದಂಡಗಳನ್ನು ಮತ್ತು ಬಧ್ದತೆಯನ್ನು ಪೂರೈಸುವುದು.
 • ಸಂಬಂಧಪಟ್ಟ ಎಲ್ಲಾ ಕಾನೂನು ಮತ್ತು ನಿಯಂತ್ರಣಗಳ ವ್ಯಾಪ್ತಿಯೊಳಗೆ ಕಂಪನಿಯ ಉತ್ಪನ್ನಗಳು ಮತ್ತು ಸೇವೆಗಳು ಬರುವುದೆಂಬುದನ್ನು ಖಚಿತಪಡಿಸುವುದು.
 • ವೃತ್ತಿಪರ, ಸೌಹಾರ್ದಯುತ, ಮತ್ತು ವೇಗದ ಸೇವೆಗಳನ್ನು ಒದಗಿಸುವುದು.
 • ಎಲ್ಲಾ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಸಮಯಕ್ಕೆ ಸರಿಯಾಗಿ ನಿಖರವಾದ ಷರತ್ತು ಮತ್ತು ನಿಯಮಗಳನ್ನು ಬಹಿರಂಗಪಡಿಸುವುದು, ವೆಚ್ಚಗಳು, ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಒದಗಿಸುವುದು.

ಕಂಪನಿಯ ಉತ್ಪನ್ನಗಳು ಯಾವ ರೀತಿಯಲ್ಲಿ ಕೆಲಸ ಮಾಡುವುದೆಂದು ಗ್ರಾಹಕರು ತಿಳಿದುಕೊಳ್ಳಲು ಸಹಾಯ ಮಾಡುವುದು:

 • ಅವರ ಹಣಕಾಸು ಸ್ಥಿತಿಯ ಪರಿಣಾಮಗಳನ್ನು ವಿವರಿಸುವುದು

ಸಂಭವನೀಯ ತಪ್ಪುಗಳನ್ನು ಸರಿಪಡಿಸಲು ವೇಗವಾಗಿ ಮತ್ತು ವಿನಯಪೂರಿತವಾಗಿ ವ್ಯವಹರಿಸುವುದು:

 • ತಪ್ಪುಗಳನ್ನು ಸರಿಪಡಿಸುವುದು:
 • ಗ್ರಾಹಕರ ದೂರುಗಳನ್ನು ನಿರ್ವಹಿಸುವುದು
 • ಗ್ರಾಹಕರಿಗೆ ತೃಪ್ತಿಯಾಗದ ಪಕ್ಷದಲ್ಲಿ ಅವರ ದೂರುಗಳನ್ನು ಮುಂದಿನ ಹಂತಕ್ಕೆ ಒಯ್ಯುವುದು ಹೇಗೆಂಬುದನ್ನು ಅವರಿಗೆ ತಿಳಿಸಿ ಹೇಳುವುದು.

ಸಾಲ ಪಡೆದುಕೊಳ್ಳಲು ಬರುವವರನ್ನು ದರ್ಮ, ಜಾತಿ, ಲಿಂಗ, ಅಥವಾ ವಂಶಾವಳಿ ಮುಂತಾದುವುಗಳ ಆಧಾರದ ಮೇಲೆ ತಾರತಮ್ಯ ಮಾಡದೇ ಇರುವುದು.

ಸಾಲದ ಅರ್ಜಿ ಮತ್ತು ಅದರ ಪ್ರಕ್ರಿಯೆ

 • ಕಂಪನಿಯು ಗ್ರಾಹಕರಿಗೆ ನೀಡುವ ತನ್ನ ಎಲ್ಲಾ ಉತ್ಪನ್ನಗಳಿಗೆ ಮುದ್ರಿತ/ಡಿಜಿಟಲ್‌ ಮಾದರಿಯ ಸಾಲದ ಅರ್ಜಿಯ ನಮೂನೆಗಳನ್ನು ಹೊಂದಿದ್ದು ಅದು ಉತ್ಪನ್ನಗಳ ಮೇಲೆ ಆಧಾರಿತವಾಗಿದೆ. ಸಾಲದ ಅರ್ಜಿಯು ನಮೂನೆಗಳಲ್ಲಿ ಎಲ್ಲಾ ಅಗತ್ಯವಾದ ಮಾಹಿತಿಯನ್ನು ಹೊಂದಿದ್ದು ಗ್ರಾಹಕರಿಗೆ ಉತ್ಪನ್ನಗಳ ಹಾಗೂ ಅದರ ಲಕ್ಷಣಗಳ ಕುರಿತಾದ ವಿವರಗಳು ಮತ್ತು ಸಾಲ ಪ್ರಕ್ರಿಯೆಗೊಳಿಸಲು ಬೇಕಾಗುವ ದಾಖಲೆಗಳ ವಿವರಗಳನ್ನು ಒಳಗೊಂಡಿದೆ.
 • ಗ್ರಾಹಕರು ಎಮ್‌ಎಮ್‌ಎಫ್‌ಎಸ್‌ಎಲ್‌ ಸಾಲಗಳನ್ನು ಪಡೆದುಕೊಳ್ಳಲು ಆಸಕ್ತಿಯನ್ನು ಹೊಂದಿದ್ದರೆ ಅಂತಹವರು ತಮ್ಮ ಸಾಲದ ವಿವರಗಳನ್ನು ತುಂಬಬೇಕು, ಎಲ್ಲಾ ರೀತಿಯ ವಿವರಗಳನ್ನು ಸಂಪೂರ್ಣವಾಗಿ ನೀಡಬೇಕು ಅಂತಹ ಅರ್ಜಿಯನ್ನು ತಮ್ಮ ಅಧಿಕೃತವಾದ ಸಹಿಯನ್ನು ಮಾಡಿ ಕಂಪನಿಗೆ ಸಲ್ಲಿಸಬೇಕು.
 • ದೈಹಿಕವಾಗಿ ಪಡೆದ ಅಥವಾ ಡಿಜಿಟಲ್‌ ಮಾದರಿಯ ಅಥವಾ ಎಸ್‌ಎಮ್‌ಎಸ್‌, ಈ ಮೇಲ್‌ ಐಡಿ ಇತ್ಯಾದಿ ರೂಪದಲ್ಲಿ ಪಡೆದ ಎಲ್ಲಾ ಸಾಲದ ಅರ್ಜಿಗಳಿಗೂ ಸಹ ಸಾಲ ಅರ್ಜಿ ಸ್ವೀಕೃತಿಯ ರಸೀತಿಲಿಯನು ಕೊಡುವ ವ್ಯವಸ್ಥೆಯನ್ನು ಹೊಂದಿದೆ. ಸಾಲ ವಿತರಣೆಯ ಸಮಯದ ಚೌಕಟ್ಟನ್ನು ಸಹ ನೀಡಲಾದ ಸ್ವೀಕೃತಿ ರಸೀದಿಯ ಮೇಲೆ ತಿಳಿಸಲಾಗಿರುತ್ತದೆ.
 • ಗ್ರಾಹಕರಿಗೆ ಅವರ ಭಾಷೆಯಲ್ಲಿ ಅವರಿಗೆ ಅರ್ಥವಾಗುವಂತಹ ರೀತಿಯಲ್ಲಿ ಸ್ಥಾನೀಯ ಭಾಷೆಯಲ್ಲಿಯೇ ಸಾಲದ ಅರ್ಜಿಯನ್ನು ನೀಡಲಾಗುತ್ತದೆ.

ಸಾಲದ ಅನುಮೋದನೆ ಮತ್ತು ಷರತ್ತುಗಳು ಹಾಗೂ ನಿಯಮಗಳು

 • ಕಂಪನಿಗೆ ಅದಕ್ಕೆ ಸಲ್ಲಿಸಲಾದ ಎಲ್ಲಾ ರೀತಿಯ ದಾಖಲೆಗಳನ್ನು ಹಾಗೂ ನೀಡಲಾದ ಮಾಹಿತಿಯನ್ನು ಪರಿಗಣಿಸಿ ಗ್ರಾಹಕರ ಸಾಲದ ಅರ್ಹತೆಯನ್ನು ಧೃಡೀಕರಿಸಿ ನೋಡಿಕೊಂಡು ಇಂತಹ ಬೇಡಿಕೆಯ ಮೌಲ್ಯಮಾಪನವನ್ನು ತನ್ನ ಸ್ವಂತ ವಿವೇಚನೆಗೆ ತಕ್ಕಂತೆ ಮಾಡುತ್ತದೆ. ಕಂಪನಿಗೆ ಒಂದೊಮ್ಮೆ ಸಲ್ಲಿಸಲಾದ ದಾಖಲೆಗಳ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಅಥವಾ ಇನ್ನಿತರ ದಾಖಲೆಗಳು ಅಗತ್ಯವಿದ್ದ ಪಕ್ಷದಲ್ಲಿ ಅದನ್ನು ಸಮಯದ ವ್ಯಾಪ್ತಿಯೊಳಗೆ ಗ್ರಾಹಕರಿಗೆ ತಿಳಿಸಲಾಗುವುದು.
 • ಅಗತ್ಯವಾದ ಪರೀಶೀಲನೆಯನ್ನು ನಡೆಸಿದ ನಂತರ ಕಂಪನಿಯು ಲಿಖಿತವಾಗಿ ದೈಹಿಕವಾಗಿ/ಡಿಜಿಟಲ್‌ ಮೋಡ್‌ನಲ್ಲಿ ಸಾಲಗಾರರಿಗೆ ತಿಳಿಸುತ್ತದೆ. ಹೀಗೆ ಮಾಡುವಾಗ ಅದು ಸಾಲವನ್ನು ಪಡೆದುಕೊಳ್ಳುವವರಿಗೆ ಅರ್ಥವಾಗುವಂತಹ ಸ್ಥಾನೀಯವಾದ ಭಾಷೆಯಲ್ಲಿ ಆಫರ್‌ ಲೆಟರ್‌ ಅನ್ನು ಅಥವಾ ಇನ್ನಿತರ ಯಾವುದೇ ವಿಧದಲ್ಲಿ, ಸಾಲದ ಅನುಮೋದಿತ ಮೊತ್ತವನ್ನು ಹಾಗೂ ಷರತ್ತುಗಳು ಮತ್ತು ನಿಯಮಗಳ ಸಹಿತ ತಿಳಿಸುವುದು (ಕಂಪನಿಯ ಫೈಲ್‌ಗಳು ಡಿಜಿಟಲ್‌ ಮಾದರಿಯಲ್ಲಿ ಇರುತ್ತದೆ ಓಟಿಪಿ ಆಧಾರಿತವಾಗಿರುವುದನ್ನು ಒಳಗೊಂಡಂತೆ) ಅಥವಾ ದೈಹಿಕವಾದ ಯಾವುದು ಅನ್ವಯವಾಗುವುದು ಅದನ್ನು ಕಂಪನಿಯು ಕಾಯ್ದಿಡುತ್ತದೆ.
 • ಸಾಲ ಒಪ್ಪಂದ ಪತ್ರದಲ್ಲಿ ವಿಳಂಬ ಮರುಪಾವತಿಗೆ ವಿಧಿಸಲಾಗುವ ದಂಡ ಶುಲ್ಕವನ್ನು ಕಂಪನಿಯು ದಪ್ಪ ಅಕ್ಷರಗಳಲ್ಲಿ ಸೂಚಿಸಿದೆ.
 • ತನ್ನ ಸಾಲ ಒಪ್ಪಂದ ಪತ್ರದಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿಗಳನ್ನು ಮತ್ತು ಸೂಚನೆಗಳನ್ನು ಒಳಗೊಂಡ ಸಾಲದ ಒಪ್ಪಂದದ ನಕಲು ಪ್ರತಿಯೊಂದನ್ನು ಕಂಪನಿಯು ತನ್ನ ಎಲ್ಲಾ ಗ್ರಾಹಕರಿಗೂ ಸಹ ಸಾಲಕ್ಕೆ ಅನುಮೋದನೆ ನೀಡುವ ಸಮಯದಲ್ಲಿ/ವಿತರಿಸುವ ಸಮಯದಲ್ಲಿ ಒದಗಿಸುತ್ತದೆ.

ಸಾಲದ ವಿತರಣೆ, ನಿಯಮಗಳು ಮತ್ತು ಷರತ್ತುಗಳಲ್ಲಿ ಬದಲಾವಣೆಯನ್ನು ಒಳಗೊಂಡಂತೆ

 • ಬಡ್ಡಿಯ ದರದಲ್ಲಿ ಬದಲಾವಣೆ, ಅವಧಿಯಲ್ಲಿ ಬದಲಾವಣೆ, ಎಲ್ಲಾ ಶುಲ್ಕಗಳು/ದಂಡಗಳಲ್ಲಿ ಬದಲಾವಣೆಯಿದ್ದರೆ ನಿಯಮಗಳಲ್ಲಿ ಬದಲಾವಣೆ ಆದರೆ ಅಂತಹ ಯಾವುದೇ ಬದಲಾವಣೆಯನ್ನು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಅಥವಾ ಸ್ಥಾನೀಯ ಭಾಷೆಯಲ್ಲಿ ಸಾಲಗಾರರಿಗೆ ತಿಳಿಸಲಾಗುವುದು. ಯಾವುದೇ ಬಡ್ಡಿ ದರದ ಬದಲಾವಣೆಗಳು ಮತ್ತು ಶುಲ್ಕಗಳು ಅದರ ನಂತರವೇ ಭವಿಷ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗುವುದು.
 • ಯಾವುದೇ ವಸೂಲಾತಿಯನ್ನು, ಪಾವತಿಯನ್ನು ವೇಗಗೊಳಿಸುವುದಾಗಲಿ ಎಲ್ಲವನ್ನು ಒಪ್ಪಂದದ ನಿಯಮಗಳಿಗೆ ಅನುಸಾರವಾಗಿ ಲಿಖಿತ ಮೂಲಕವಾಗಿ ಸಾಲಗಾರರಿಗೆ ತಿಳಿಸಲಾಗುವುದು.
 • ಎಲ್ಲಾ ಸಾಲವನ್ನು ಮರಳಿ ಪಡೆದ ನಂತರ ನೂ ಡ್ಯೂ ಸರ್ಟಿಪಿಕೇಟ್ ಅನ್ನು ನೀಡಲಾಗುವುದು. ಯಾವುದೇ ರೀತಿಯ ಅಡಮಾನವನ್ನು, ಒಂದೊಮ್ಮೆ ಇದ್ದರೆ, ಅದನ್ನು ನೂ ಡ್ಯೂ ಸರ್ಟಿಪಿಕೇಟ್ ಜೊತೆಗೆ ಬಿಡುಗಡೆ ಮಾಡಲಾಗುವುದು. ಯಾವುದೇ ರೀತಿಯ ಅಡಮಾನವನ್ನು ಒಪ್ಪಂದಕ್ಕೆ ಒತ್ತಾಸೆಯಾಗಿ ಖಾತರಿಗಾಗಿ ನೀಡಲಾಗಿದ್ದರೆ ಅದನ್ನು ವಿದ್ಯುಕ್ತವಾಗಿ ಒಪ್ಪಿಕೊಂಡ ರಸೀತಿಯನ್ನು ನೀಡಲಾಗುವುದು ಮತ್ತು ಅದನ್ನು ಸುರಕ್ಷಿತವಾದ ರೀತಿಯಲ್ಲಿ ಕಾಯ್ದಿಡಲಾಗುವುದು.

ಸಾಮಾನ್ಯ

 • ಎಲ್ಲಾ ರೀತಿಯ ಸಂವಹನಗಳನ್ನು ಸಾಲಗಾರರಿಗೆ ಅರ್ಥವಾಗುವಂತಹ ಅವರ ಭಾಷೆಯಲ್ಲಿ ಅಥವಾ ಸ್ಥಾನೀಯ ಭಾಷೆಯಲ್ಲಿ ನಡೆಲಾಗುವುದು.
 • ಸಾಲಗಾರರೊಂದಿಗೆ ಮಾಡಿಕೊಂಡ ಸಾಲದ ಒಪ್ಪಂದ ಪತ್ರದಲ್ಲಿ ತಿಳಿಸಿರುವ ಪ್ರಕಾರವಾಗಿ ಕಾನೂನುಬಧ್ದವಾಗಿ ಅನುಮತಿಯುಳ್ಳ ಪರಿಹಾರ ಕ್ರಮಗಳನ್ನು ಕಂಪನಿಯು ತನ್ನ ಕ್ರಮಗಳನ್ನು ಹಾಗೂ ಚರ್ಯೆಗಳನ್ನು ಕೈಗೊಳ್ಳುವುದು.
 • ಸಾಲಗಾರರೊಂದಿಗೆ ಅವರ ವ್ಯವಹಾರದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪವನ್ನು ಕಂಪನಿಯು ಮಾಡುವುದಿಲ್ಲ. ಸಾಲದ ಒಪ್ಪಂದ ಪತ್ರದಲ್ಲಿ ತಿಳಿಸಿದ ನಿಯಮಗಳು ಮತ್ತು ಷರತ್ತುಗಳ ಉದ್ದೇಶದ ಹೊರತಾಗಿ (ಯಾವುದೇ ರೀತಿಯ ಮಾಹಿತಿಯನ್ನು ಸಾಲ ಪಡೆದುಕೊಂಡುವರು ಮರೆಮಾಚಿದ್ದರೆ ಅಂತಹ ಸಂದರ್ಭದ ಹೊರತಾಗಿ) ಯಾವುದೇ ರೀತಿಯ ಹಸ್ತಕ್ಷೇಪವನ್ನು ಕಂಪನಿಯು ನಡೆಸುವುದಿಲ್ಲ.
 • ಸಾಲ ಪಡೆದುಕೊಂಡವರಿಂದ ಸಾಲ ಪಡೆದ ಮೊತ್ತವನ್ನು ವರ್ಗಾವಣೆ ಮಾಡಿಕೊಡಲು ಬೇಕಾದ ವಿನಂತಿಯ ಸ್ವೀಕರಿಸಿದರೆ, ಕಂಪನಿಯ ಒಪ್ಪಿಗೆಯನ್ನು ಪಡೆದನಂತರ, ಅಥವಾ ಕಂಪನಿಯ ಆಕ್ಷೇಪದ ನಂತರ, ಯಾವುದಾದರೂ ಇದ್ದರೆ, ಅದನ್ನು ಅಂತಹ ವಿನಂತಿಯ ರಸೀತಿಯ ದಿನಾಂಕದಿಂದ 21 ದಿನಗಳ ಒಳಗೆ ತಿಳಿಸಲಾಗುವುದು. ಕಾನೂನುಬಧ್ದವಾಗಿ ಒಪ್ಪಂದದ ನಿಯಮಗಳ ಪ್ರಕಾರವಾಗಿ ಯಾವ ರೀತಿಯ ಪಾರದರ್ಶಕತೆಯು ಸಾಧ್ಯವೋ ಅದರಂತೆ ಇಂತಹ ವರ್ಗಾವಣೆಯನ್ನು ಮಾಡಲಾಗುವುದು.
 • ಯಾವುದೇ ಏಜೆನ್ಸಿಯಾಗಲಿ ತನ್ನ ಹಲವಾರು ಚಟುವಟಿಕೆಗಳನ್ನು ಹೊರಗುತ್ತಿಗೆ/ಇತರರಿಗೆ ಒಪ್ಪಿಸುವುದು ಇದ್ದರೆ ಅಂತಹುವುದನ್ನು ಆರಿಸಿಕೊಂಡು ಕಂಪನಿಯ ಪಾಲಿಸಿಯ ಪ್ರಕಾರವಾಗಿ ಕಾಲಕಾಲಕ್ಕೆ ತಕ್ಕಂತೆ ಆರಿಸಿಕೊಳ್ಳಲಾಗುವುದು.
 • ಸಾಲ ವಸೂಲಾತಿಯಲ್ಲಿ ಪರಿಣಿತಿ ಹೊಂದಿದ ವಿಶೇಷವಾದ ವಸೂಲಾತಿ ತಂಡವನ್ನು ಕಂಪನಿಯು ಹೊಂದಿದ್ದು ಅವರು ವೃತ್ತಿಪರ ರೀತಿಯನ್ನು ವಿಧ್ಯುಕ್ತವಾದ ಕಾನೂನು ಪ್ರಕ್ರಿಯೆಯನ್ನು ಬಳಸಿಕೊಂಡು ಅಲ್ಲಿನ ಕಾನೂನಿಗೆ ತಕ್ಕಂತೆ ಕ್ರಮವನ್ನು ಕೈಗೊಳ್ಳುವರು. ಇದೊಂದು ವಿಶೇಷ ರೀತಿಯ ಕಾರ್ಯಾಚರಣೆಯಾಗಿರುವುದರಿಂದ ನೇಮಕಾತಿಯ ಮಟ್ಟದಲ್ಲಿಯೇ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲಾಗುವುದು.
 • ಸಾಲ ವಸೂಲಾತಿಗೆ ಸಂಬಂಧಪಟ್ಟಂತೆ, ಕಂಪನಿಯು ಯಾವುದೇ ರೀತಿಯ ಕಿರುಕುಳವನ್ನು ಗ್ರಾಹಕರಿಗೆ ನೀಡುವುದಿಲ್ಲ – ಹೇಗೆಂದರೆ ಸಾಲಗಾರರನ್ನು ಹೊತ್ತುಗೊತ್ತಿಲ್ಲದೆ ನಿರಂತರವಾಗಿ ಬಾಧಿಸುವುದು (ಬೆಳಗ್ಗೆ 8.00 ಮುಂಚೆ ಮತ್ತು ಸಂಜೆ 7.00ಗಂಟೆಯ ನಂತರ) ಸಾಲ ವಸೂಲಾತಿಗೆ ದೈಹಿಕವಾಗಿ ತೊಂದರೆ ನೀಡುವುದು ಇತ್ಯಾದಿ ಮಾಡುವುದಿಲ್ಲ. ಮುಂದುವರೆದು ಹೇಳುವುದಾದರೆ, ಉದ್ಯೋಗಿಗಳು/ಏಜೆಂಟ್‌ಗಳು ಗ್ರಾಹಕರೊಂದಿಗೆ ಸೂಕ್ತವಾದ ರೀತಿಯಲ್ಲಿ ವ್ಯವಹರಿಸಲು ಅವರಿಗೆ ಸಾಕಷ್ಟು ತರಬೇತಿಯನ್ನು ನೀಡಲಾಗಿರುತ್ತದೆ.
 • ಹಲವಾರು ಸಂಬಂಧಪಟ್ಟ ವಿಷಯಗಳನ್ನು ಪರಿಗಣಿಸಿ ಕಂಪನಿಯು ಬಡ್ಡಿಯ ದರದ ಮಾದರಿಯನ್ನು ಅಳವಡಿಸಿಕೊಂಡಿದೆ; ಅವುಗಳು ಯಾವುವೆಂದರೆ ಹಣಕಾಸು ವೆಚ್ಚ, ಮಾರ್ಜಿನ್‌ ಮತ್ತು ಅಪಾಯದ ಪ್ರೀಮಿಯಂ, ಇತ್ಯಾದಿ. ಇವುಗಳು ಸಾಲಗಳಿಗೆ ಮತ್ತು ಮುಂಗಡ ಹಣಕ್ಕೆ ತಗುಲುವ ಶುಲ್ಕವನ್ನು ಲೆಕ್ಕ ಹಾಕಿ ಬಡ್ಡಿಯ ದರವನ್ನು ನಿರ್ಧರಿಸುವುದರಿಂದ ಅದು ಬಡ್ಡಿಯ ದರವು ಅತಿಯಾಗಿ ಹೆಚ್ಚಾಗದಂತೆ ಖಚಿತ ಪಡಿಸುತ್ತದೆ. ಸಾಲವನ್ನು ವಿತರಿಸುವಾಗ, ಕಂಪನಿಯು ಅಳವಡಿಸಿಕೊಂಡಿರುವ ಬಡ್ಡಿಯ ದರದ ಮಾದರಿಗೆ ಶಿಸ್ತಿನಿಂದ ನಿಭಾಯಿಸುತ್ತದೆ ಹಾಗೂ ಅದರ ಪ್ರಕಾರವಾಗಿ ಬಡ್ಡಿಯು ದರವನ್ನು ಸಾಲಕ್ಕೆ ಮತ್ತು ಮುಂಗಡ ಹಣಕಾಸು ಸಾಲಕ್ಕೆ ಅನ್ವಯಿಸುವುದನ್ನು ಖಚಿತಪಡಿಸಿಕೊಳ್ಳುತ್ತದೆ. ಬಡ್ಡಿಯ ದರವು ಹಾಗೂ ಅಪಾಯ ಹಾಗೂ ಸಮಂಜಸವಾದ ವಿಭಿನ್ನ ಬಗೆಯ ಬಡ್ಡಿಯ ದರವನ್ನು ವಿಭಿನ್ನ ವರ್ಗದ ಸಾಲಗಾರರಿಗೆ ವಿಧಿಸುವ ರೀತಿಯನ್ನು ಸಾಲಗಾರರಿಗೆ ಸಾಲವನ್ನು ವಿತರಿಸುವಾಗ ಅವರ ಅರ್ಜಿಯ ನಮೂನೆಯಲ್ಲಿ, ಆಫರ್‌ ಲೆಟರ್‌ನಲ್ಲಿ ಮತ್ತು ಕಂಪನಿಯ ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಲಾಗುವುದು.
 • ಯಾವುದೇ ಫ್ಲೋಟಿಂಗ್‌ ರೇಟ್‌ ಟರ್ಮ್‌ ಲೋನ್‌ ನೀಡುವಾಗ ವೈಯುಕ್ತಿಕ ಸಾಲಗಾರರಿಗೆ, ಜವಾಬ್ದಾರಿ ಹೋರುವ ಸಹಚರರ ಅಥವಾ ಸಹಚರರಿಲ್ಲದ ವೈಯುಕ್ತಿಕ ಸಾಲಗಾರರ ಹೊರತಾಗಿ ವ್ಯಾಪಾರದ ಉದ್ದೇಶಕ್ಕಾಗಿ ನೀಡುವ ಸಾಲದ ಹೊರತಾಗಿ, ಕಂಪನಿಯು ಯಾವುದೇ ರೀತಿಯ ಪೂರ್ವಾನುಮರುಪಾವತಿಗೆ ಪ್ರಿ-ಪೇಮೆಂಟ್‌ ದಂಡವನ್ನಾಗಲಿ ಅಥವಾ ಫೋರ್‌ಕ್ಲೋಶರ್‌ ದಂಡವನ್ನಾಗಲಿ ವಿಧಿಸುವುದಿಲ್ಲ.

ನೊಂದವರು ದೂರು ನೀಡುವ ಪ್ರಕ್ರಿಯೆ

ಕಂಪನಿಯು ಸೂಕ್ತವಾದ ತೊಂದರೆ ಪರಿಹರಿಸುವ ಪ್ರಕ್ರಿಯೆಯನ್ನು ತನ್ನ ಆಡಳಿತದಲ್ಲಿ ಇದಕ್ಕೆ ಸಂಬಂಧಪಟ್ಟ ವ್ಯಾಜ್ಯಗಳನ್ನು ಪರಿಹರಿಸುವ ವಿಧಾನವನ್ನು ಅಳವಡಿಸಿಕೊಂಡಿದೆ

ತನ್ನ ಗ್ರಾಹಕರ ಅನುಕೂಲಕ್ಕಾಗಿ, ವ್ಯವಹಾರ ನಡೆಸುವ ಎಲ್ಲಾ ಸ್ಥಳಗಳಲ್ಲಿಯೂ ತನ್ನ ಎಲ್ಲಾ ಶಾಖೆಗಳಲ್ಲಿಯೂ/ಸ್ಥಳಗಳಲ್ಲಿ ಪ್ರಮುಖವಾಗಿ ಕಂಪನಿಯು ಈ ಕೆಳಗೆ ನೀಡಲಾದ ಮಾಹಿತಿಯನ್ನು ಪ್ರದರ್ಶಿಸುತ್ತದೆ,

 • ಸಾರ್ವಜನಿಕರು ಸುಲಭವಾಗಿ ಸಂಪರ್ಕಿಸಬಹುದಾದ ಕಂಪನಿಯ ವಿರುಧ್ದ ನೀಡುವ ದೂರಿಗೆ, ದೂರು ಪರಿಹಾರ ಮಾಡುವ ಅಧಿಕಾರಿಯ/ಪ್ರಿನ್ಸಿಪಲ್‌ ನೋಡಲ್‌ ಅಧಿಕಾರಿಯ ಹೆಸರು ಮತ್ತು ಸಂಪರ್ಕ ವಿವರಗಳು(ಟೆಲಿಪೋನ್/ಮೊಬೈಲ್‌ ನಂಬರ್‌, ಮತ್ತು ಈಮೇಲ್‌ ವಿಳಾಸ)
 • ರಿಸರ್ವ್‌ ಬ್ಯಾಂಕ್‌-ಇಂಟಿಗ್ರೇಟೆಡ್‌ ಓಂಬಡ್ಸ್‌ಮನ್‌ ಸ್ಕೀಮ್‌, 2021 (ಸ್ಕೀಮ್‌’))
 • ಸ್ಕೀಮ್‌ನ ಪ್ರಮುಖ ಲಕ್ಷಣಗಳನ್ನು ಇಂಗ್ಲೀಷ್‌, ಹಿಂದಿ ಮತ್ತು ಸ್ಥಾನೀಯ ಭಾಷೆಗಳಲ್ಲಿ ನೀಡಲಾಗಿದೆ.
 • ಒಂದೊಮ್ಮೆ ದೂರು/ವ್ಯಾಜ್ಯವನ್ನು ಒಂದು ತಿಂಗಳ ಒಳಗೆ ವಿಚಾರಣೆ ನಡಸದೇ ಹೋದರೆ ಆಗ ಗ್ರಾಹಕರು ರಿಸರ್ವ್‌ ಬ್ಯಾಂಕ್‌ ಪೋರ್ಟಲ್‌ https://cms.rbi.org.in ಮೂಲಕ ರಿಸರ್ವ ಬ್ಯಾಂಕ್‌ ಆಫ್‌ ಇಂಡಿಯಾ ವಿನಂತಿಸಿಕೊಳ್ಳಬಹುದು..

ಪ್ರಿನ್ಸಿಪಲ್‌ ನೋಡಲ್‌ ಅಧಿಕಾರಿಯ ಅಪಾಯಿಂಟ್ಮೆಂಟ್

ರಿಸರ್ವ್‌ ಬ್ಯಾಂಕ್‌ -ಇಂಟಿಗ್ರೇಟೆಡ್‌ ಓಂಬಡ್ಸ್‌ಮನ್‌ ಸ್ಕೀಮ್‌, 2021 ಪ್ರಕಾರ ನೀಡಿರುವ ದಿಕ್ಸೂಚಿಗಳಿಗೆ ಅನುಗುಣವಾಗಿ ಕಂಪನಿಯು ಪ್ರಿನ್ಸಿಪಲ್‌ ನೋಡಲ್‌ ಅಧಿಕಾರಿಯನ್ನು ನೇಮಕಾತಿ ಮಾಡಿದೆ.


ಇಂಟರ್ನಲ್‌ ಒಂಬಡ್ಸ್‌ಮನ್ ಅಪಾಯಿಂಟ್ಮೆಂಟ್

ಕಂಪನಿಯು ಆರ್‌ಬಿಐ ಹೊರಡಿಸಿರುವ ಸುತ್ತೋಲೆ “ಅಪಾಯಿಂಟ್ಮೆಂಟ್‌ ಆಫ್‌ ಇಂಟರ್ನಲ್‌ ಒಂಬಡ್ಸ್‌ಮನ್, ನಾನ್‌-ಬ್ಯಾಂಕಿಂಗ್‌ ಫೈನಾನ್ಶಿಯಲ್‌ ಕಂಪನೀಸ್‌” ದಿನಾಂಕ 15 ನವೆಂಬರ್‌ ತಿಂಗಳು, 2021 ಪ್ರಕಾರವಾಗಿ ಇಂಟರ್ನಲ್‌ ಒಂಬಡ್ಸ್‌ಮನ್ ಅನ್ನು ನೇಮಕಾತಿ ಮಾಡಿದೆ.


ವಾಹನಗಳನ್ನು ಮರಳಿ ವಶಕ್ಕೆ ಪಡೆಯುವುದು

ಕಂಪನಿಯು ಮರಳಿ ವಶಕ್ಕೆ ಪಡೆಯುವ ನಿಯಮಾವಳಿಗಳನ್ನು ಅಭಿವೃದ್ದಿ ಪಡಿಸಿದ್ದು ಅದನ್ನು ತನ್ನ ಒಪ್ಪಂದ/ಸಾಲದ ಅನುಮತಿ ಪತ್ರದಲ್ಲಿ ನಮೂದಿಸಿದ್ದು ಅದಕ್ಕೆ ಸಾಲಗಾರರು ಕಾನೂನು ರೀತ್ಯ ಬಧ್ದವಾಗಿರಿಸಿದೆ. ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು, ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಂದ/ಸಾಲದ ಅನುಮತಿಯು ಈ ಕೆಳಗೆ ನೀಡಲಾದ ಲಕ್ಷಣಗಳನ್ನು ಹೊಂದಿದೆ.

 1. ಮರಳಿ ವಶಕ್ಕೆ ತೆಗೆದುಕೊಳ್ಳುವ ಮುಂಚೆ ನೋಟಿಸ್‌ ಅವಧಿ ನೀಡುವುದು.
 2. ಯಾವ ಸಂದರ್ಭದಲ್ಲಿ ನೋಟಿಸ್‌ ಪೀರಿಯಡ್‌ ತಳ್ಳಿಹಾಕಬಹುದು.
 3. ಸೆಕ್ಯೂರಿಟಿಯನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ
 4. ಆಸ್ತಿಯನ್ನು ಹರಾಜು ಮಾಡುವ ಮುನ್ನ ಅಥವಾ ಮಾರಾಟ ಮಾಡುವ ಮುನ್ನ ಸಾಲಗಾರರಿಗೆ ಸಾಲ ಮರುಪಾವತಿಗೆ ಒಂದು ಅಂತಿಮ ಅವಕಾಶವನ್ನು ನೀಡುವುದು.
 5. ಸಾಲಗಾರರಿಗೆ ಮರಳಿ ವಶಕ್ಕೆ ನೀಡುವ ಪ್ರಕ್ರಿಯೆ ಮತ್ತು
 6. ಆಸ್ತಿಯ ಮಾರಾಟ/ಹರಾಜು ಮಾಡುವ ಪ್ರಕ್ರಿಯೆ

ಸಾಲಗಾರರ ಹಾಗೂ ಕಂಪನಿಯ ನಡವೆ ಜಾರಿಗೊಳಿಸಲಾದ ಸಾಲದ ಒಪ್ಪಂದ ಪತ್ರದಲ್ಲಿ ಇಂತಹ ನಿಯಮಗಳು ಹಾಗೂ ಷರತ್ತಿನ ಬಗ್ಗೆ ಇರುವ ಪತ್ರದ ನಕಲನ್ನು ಅವರಿಗೆ ಲಭ್ಯವಾಗುವಂತೆ ಮಾಡಲಾಗುವುದು./p>

ಡಿಜಿಟಲ್‌ ಮೂಲಕ ನೀಡಲಾದ ಸಾಲಗಳು

ತನ್ನದೇ ಸ್ವಂತ ಡಿಜಿಟಲ್‌ ಸಾಲ ನೀಡುವ ವೇದಿಕೆಯಿಂದ ನೀಡಲಾದ ಸಾಲಗಳಾಗಲಿ ಅಥವಾ ಹೊರಗುತ್ತಿಗೆಯ ಮೂಲಕ ನೀಡಲಾದ ಸಾಲಗಳಾಗಲಿ ಯಾವುದೇ ಇದ್ದರೂ ಕಂಪನಿಯು ತನ್ನ ಈ ಫೇರ್‌ ಪ್ರಾಕ್ಟೀಸ್‌ ಕೋಡ್‌ಗೆ ಬಧ್ದವಾಗಿದೆ.

ಸೆಪ್ಟಂಬರ್‌ 2, 2022ರಂದು ಹೊರಡಿಸಲಾದ ಆರ್‌ಬಿಐ ಸುತ್ತೋಲೆಯ ಪ್ರಕಾರ “ಗೈಡ್‌ಲೈನ್ಸ್‌ ಆನ್‌ ಡಿಜಿಟಲ್‌ ಲೆಂಡಿಂಗ್‌” (ಆರ್‌ಬಿಐ ಗೈಡ್‌ಲೈನ್ಸ್‌”) ಪ್ರಕಾರ ಕಂಪನಿಯು ತನ್ನ ಸಾಲಗಾರರಿಗೆ ಅಥವಾ ಕಂಪನಿಯ ಎಲ್ಲಾ ಡಿಜಿಟಲ್‌ ಸಾಲ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಈ ಕೆಳಗೆ ಸೂಚಿಸಲಾದ ಮಾಹಿತಿಯನ್ನು ಬಹಿರಂಗಪಡಿಸಬೇಕು.

  1. ವಾರ್ಷಿಕ ಶೇಕಡವಾರು ಬಡ್ಡಿಯ ದರ (ಎಪಿಆರ್‌) ಪ್ರಮುಖ ವಿಷಯ ಹೇಳಿಕೆಯ ಭಾಗವಾಗಿ ಬಹಿರಂಗಪಡಿಸಬೇಕು. (ಕೆಎಫ್‌ಎಸ್‌)
  2. ಕಂಪನಿಯು ತನ್ನ ಸಾಲಗಾರರಿಗೆ ಕೆಎಫ್‌ಎಸ್‌ ಒಪ್ಪಂದದ ಜಾರಿಗೊಳಿಸುವುದಕ್ಕೆ ಮುಂಚೆಯೇ ಒದಗಿಸಬೇಕು. ಯಾವುದೇ ಶುಲ್ಕವಾಗಲಿ, ದಂಡವಾಗಲಿ, ಇತ್ಯಾದಿಗಳನ್ನು ನೀಡಬೇಕು. ಯಾವುದನ್ನು ಕೆಎಫ್‌ಎಸ್‌ನಲ್ಲಿ ತಿಳಿಸಲಾಗಿಲ್ಲವೋ ಅದಕ್ಕೆ ಕಂಪನಿಯು ಯಾವುದೇ ಹಂತದಲ್ಲಿ ಆದರೂ ಸರಿಯೇ ಸಾಲದ ಅವಧಿಯಲ್ಲಿ ಯಾವುದೇ ಶುಲ್ಕವನ್ನು ವಿಧಿಸುವಂತಿಲ್ಲ.
  3. ಕಂಪನಿಯು ಡಿಜಿಟಲ್‌ ಸಹಿ ಹೊಂದಿರುವ ದಾಖಲೆಗಳು ಸ್ವಯಂಚಾಲಿತವಾಗಿ ಸಾಲಗಾರರು ನೋಂದಣಿ ಮಾಡಿಕೊಂಡ ಈಮೇಲ್‌/ಎಸ್‌ಎಮ್‌ಎಸ್‌ ಮೂಲಕವಾಗಿ ಆಗಲಿ ಸಾಲದ ಒಪ್ಪಂದ/ವ್ಯವಹಾರದ ಮಂಜೂರಾತಿಯಾದ ಕೂಡಲೇ ತಲುಪವಂತೆ ಮಾಡುತ್ತದೆ.
  4. ಕಂಪನಿಯು ಮುಖ್ಯವಾಗಿ ತಮ್ಮ ಡಿಜಿಟಲ್‌ ಲೆಂಡಿಂಗ್‌ ಆಪ್‌ಗಳು/ವೇದಿಕೆಗಳು (ಡಿಎಲ್‌ಎಗಳು), ಲೆಂಡರ್‌ ಸರ್ವೀಸ್‌ ಪ್ರವೈಡರ್‌ (ಎಲ್‌ಎಸ್‌ಪಿ) ಮತ್ತು ಎಲ್‌ಎಸ್‌ಪಿಯ ಡಿಎಲ್‌ಎಗಳು ವಿವರಗಳು ಮತ್ತು ಅವುಗಳಿಗೆ ವಹಿಸಲಾದ ಚಟುವಟಿಕೆಗಳ ವಿವರಗಳ ಸಹಿತವಾಗಿ ತಮ್ಮ ವೆಬ್‌ಸೈಟ್‌ನಲ್ಲಿ ಪಟ್ಟಿಯನ್ನು ನೀಡುತ್ತದೆ.
  5. ಆನ್‌ ಬೋರ್ಡಿಂಗ್‌/ಸೈನ್‌ ಅಪ್‌ ಹಂತದಲ್ಲಿರುವಾಗ ಕಂಪನಿಯು ಅದರ ಡಿಎಲ್‌ಎ ಅಥವಾ ಎಲ್‌ಎಸ್‌ಪಿಗಳ ಡಿಎಲ್‌ಎಗಳು ಉತ್ಪನ್ನಗಳಿಗೆ ಸಂಬಂಧಪಟ್ಟ ಮಾಹಿತಿ, ಸಾಲದ ಮಿತಿ ಮತ್ತು ವೆಚ್ಚ ಇತ್ಯಾದಿಗಳ ಬಗೆಗೆ ಮಾಹಿತಿಯನ್ನು ಪ್ರಮುಖವಾಗಿ ಪ್ರರ್ದಶಿಸುತ್ತದೆ. ಹಾಗಾಗಿ ಸಾಲಗಾರರಿಗೆ ಈ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ.
  6. ಸಾಲ ಮಂಜೂರು ಮಾಡುವ ಸಮಯದಲ್ಲಿ ಕಂಪನಿಯು ಸಾಲಗಾರರಿಗೆ ಮತ್ತು ಸಾಲ ವಸೂಲಾತಿಯ ಜವಾಬ್ದಾರಿಯನ್ನು ಹೊಂದಿರುವ ಎಲ್‌ ಎಸ್‌ಪಿಗಳೀಗೆ ಅಥವಾ ಎಲ್‌ಎಸ್‌ಪಿಗಳು ಬದಲಾವಣೆಯ ವಿವರಗಳನ್ನು ಮತ್ತು ರಿಕವರಿ ಏಜೆಂಟ್‌ಗಳನ್ನಾಗಿ ಯಾರಿಗೆ ಅಧಿಕೃತವಾದ ಅಧಿಕಾರವಿದೆ ಮತ್ತು ಅವರು ಸಾಲಗಾರರನ್ನು ವಸೂಲಾತಿಗೆ ಸಂಬಂಧಿಸಿದಂತೆ ಸಂಪರ್ಕಿಸುವರು ಎಂಬುದರ ಕುರಿತಾಗಿ ವಿವರಗಳನ್ನು ನೀಡುತ್ತದೆ.
  7. ಕಂಪನಿಯ ವೆಬ್‌ಸೈಟ್‌ನಲ್ಲಿ ತನ್ನ ಡಿಎಲ್‌ಎಗಳ ಮತ್ತು ಎಲ್‌ಎಸ್‌ಪಿಗಳ ವಿವರಗಳ ಲಿಂಕ್‌ ನೀಡುವುದನ್ನು ಖಚಿತಪಡಿಸುತ್ತದೆ. ಅದರಲ್ಲಿ ಕಂಪನಿಯ ಸಾಲ ಉತ್ಪನ್ನಗಳ ಕುರಿತಾದ ಮುಂದಿನ/ವಿವರವಾದ ಮಾಹಿತಿಯಿದ್ದು, ಸಾಲ ನೀಡುವವರು, ಎಲ್‌ಎಸ್‌ಪಿ, ಗ್ರಾಹಕರ ಕಾಳಜಿಯ ವಿವರಗಳು, ಸಾಚೆಟ್‌ ಪೋರ್ಟಲ್‌, ಪ್ರೈವೆಸಿ ಪಾಲಿಸಿ ಇತ್ಯಾದಿಗಳ ವಿವರಗಳನ್ನು ಲಭ್ಯವಾಗುವುದನ್ನು ಖಚಿತಪಡಿಸುತ್ತದೆ.
  8. ಸೂಕ್ತವಾದ ಮತ್ತು ಸಮಂಜವಾದ ನೋಡಲ್‌ ಗ್ರೀವಿಯನ್ಸ್ ರಿಡ್ರೆಸಲ್‌ ಅಧಿಕಾರಿಯು ಸಾಲಗಾರರು ಸಲ್ಲಿಸುವ ಫಿನ್‌ಟೆಕ್‌/ಡಿಜಿಟಲ್‌ ಲೆಂಡಿಂಗ್‌ ಸಂಬಂಧಿಸಿದ ದೂರುಗಳನ್ನು ಸಮಸ್ಯೆಗಳನ್ನು ಪರಿಹರಿಸಲು ಇರುವರು ಎಂಬುದನ್ನು ಖಚಿತಪಡಿಸುತ್ತದೆ.

ಸಂಪರ್ಕದಲ್ಲಿರಲು

ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್
4 ನೇ ಮಹಡಿ, ಮಹಿಂದ್ರಾ ಟವರ್ಸ್,
ಡಾ.ಜಿ.ಎಂ. ಭೋಸಲೆ ಮಾರ್ಗ,
ಪಿ.ಕೆ. ಕುರ್ನೆ ಚೌಕ್, ವರ್ಲಿ,
ಮುಂಬೈ 400 018.

ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್ ಶಾಖೆಯನ್ನು ಕಂಡುಕೊಳ್ಳಿ

Calculate Your EMI

 • Diverse loan offerings
 • Less documenation
 • Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50000