ડો ಡಾ. ಅನೀಶ್ ಷಾ ಅವರು ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಆಗಿದ್ದಾರೆ. ಇವರು 2014 ರಲ್ಲಿ ಗ್ರೂಪ್ ಪ್ರೆಸಿಡೆಂಟ್ (ಸ್ಟ್ರಾಟಜಿ) ಆಗಿ ಮಹೀಂದ್ರಾ ಗ್ರೂಪ್ಗೆ ಸೇರಿಕೊಂಡರು ಮತ್ತು ಪ್ರಮುಖ ಕಾರ್ಯತಂತ್ರದ ಉಪಕ್ರಮಗಳು, ಡಿಜಿಟೈಸೇಷನ್ ಮತ್ತು ಡೇಟಾ ಸೈನ್ಸಸ್ನಂತಹ ರಚಿತ ಸಾಮರ್ಥ್ಯಗಳ ಕುರಿತಾದ ಎಲ್ಲಾ ವ್ಯವಹಾರಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ ಮತ್ತು ಗ್ರೂಪ್ ಕಂಪೆನಿಗಳಾದ್ಯಂತ ಸಿನರ್ಜಿಗಳನ್ನು ಸಾಧ್ಯಗೊಳಿಸಿದ್ದಾರೆ. ಸಿಇಒ ಪಾತ್ರಕ್ಕೆ ಬದಲಾವಣೆ ಯೋಜನೆಯ ಒಂದು ಭಾಗವಾಗಿ, 2019 ರಲ್ಲಿ ಇವರನ್ನು ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಗ್ರೂಪ್ ಸಿಎಫ್ಒ ಆಗಿ ನೇಮಿಸಲಾಯಿತು ಮತ್ತು ಗ್ರೂಪ್ ಕಾರ್ಪೊರೇಟ್ ಆಫೀಸಿನ ಜವಾಬ್ದಾರಿಯನ್ನು ಮತ್ತು ಆಟೋ ಮತ್ತು ಫಾರ್ಮ್ ಸೆಕ್ಟರ್ಗಳನ್ನು ಹೊರತುಪಡಿಸಿ ಎಲ್ಲಾ ವ್ಯವಹಾರಗಳ ಪೂರ್ಣ ಮೇಲ್ವಿಚಾರಣೆಯನ್ನು ಇವರಿಗೆ ನೀಡಲಾಯಿತು.
ಅನೀಶ್ ಅವರು 2009-14ರವರೆಗೆ GE (ಜಿಇ) ಕ್ಯಾಪಿಟಲ್ ಇಂಡಿಯಾದ ಅಧ್ಯಕ್ಷರು ಮತ್ತು ಸಿಇಒ ಆಗಿದ್ದರು, ಅಲ್ಲಿ ಇವರು SBI (ಎಸ್ಬಿಐ) ಕಾರ್ಡ್ ಜಂಟಿ ಉದ್ಯಮದ ಟರ್ನ್ಅರೌಂಡ್ ಸೇರಿದಂತೆ ವ್ಯವಹಾರದ ಪರಿವರ್ತನೆಗೆ ಕಾರಣರಾದರು. ಜಿಇಯಲ್ಲಿ ಇವರು 14 ವರ್ಷಗಳವರೆಗೆ ವೃತ್ತಿ ಮಾಡಿದ್ದು, ಈ ಸಮಯದಲ್ಲಿ ಅವರು ಜಿಇ ಕ್ಯಾಪಿಟಲ್ಸ್ ಯುಎಸ್ ಮತ್ತು ಜಾಗತಿಕ ಘಟಕಗಳಲ್ಲಿ ಹಲವಾರು ನಾಯಕತ್ವ ಸ್ಥಾನಗಳನ್ನು ಹೊಂದಿದ್ದರು. ಗ್ಲೋಬಲ್ ಮಾರ್ಟ್ಗೇಜ್ನ ನಿರ್ದೇಶಕರಾಗಿ, ಇವರು 33 ದೇಶಗಳಾದ್ಯಂತ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ರಿಸ್ಕ್ ಅನ್ನು ನಿರ್ವಹಿಸಲು ಕೆಲಸ ಮಾಡಿದರು. ಜಿಇ ಮಾರ್ಟ್ಗೇಜ್ ಇನ್ಶುರೆನ್ಸ್ ಕಂಪೆನಿಯಲ್ಲಿ ಹಿರಿಯ ಉಪಾಧ್ಯಕ್ಷರಾಗಿ (ಮಾರ್ಕೆಟಿಂಗ್ ಮತ್ತು ಉತ್ಪನ್ನ ಅಭಿವೃದ್ಧಿ) ಇವರು ವಿವಿಧ ಬೆಳವಣಿಗೆಯ ಉಪಕ್ರಮಗಳಿಗೆ ಮುಖಂಡರಾಗಿ ಮತ್ತುಜಿಇ ಯಿಂದ ಹಿಂತಿರುಗಿ ಐಪಿಒಗೆ ವ್ಯಾಪಾರವನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು,ಜಿಇ ಜೊತೆಗಿನ ತಮ್ಮ ಆರಂಭಿಕ ವರ್ಷಗಳಲ್ಲಿ ಅನೀಶ್ ಅವರು, ಸ್ಟ್ರಾಟಜಿ, ಇಕಾಮರ್ಸ್ ಮತ್ತು ಸೇಲ್ಸ್ ಫೋರ್ಸ್ ಎಫೆಕ್ಟೀವ್ನೆಸ್ ಅನ್ನು ಮುನ್ನಡೆಸಿದರು ಮತ್ತು ಜಿಇ ಒಳಗೇ ಒಂದು ಡಾಟ್-ಕಾಮ್ ವ್ಯವಹಾರವನ್ನು ನಡೆಸುವ ಅಪೂರ್ವ ಅನುಭವವನ್ನು ಪಡೆದರು. "ಡಿಜಿಟಲ್ ಕಾಕ್ ಪಿಟ್" ಅನ್ನು ಅಭಿವೃದ್ಧಿಪಡಿಸುವುದರಲ್ಲಿ ಸಿಕ್ಸ್ ಸಿಗ್ಮಾವನ್ನು ಅತ್ಯುತ್ತಮವಾಗಿ ಬಳಸಿದ್ದಕ್ಕಾಗಿ ಅನೀಶ್ ಅವರು ಜಿಇಯ ಪ್ರತಿಷ್ಠಿತ ಲೂವೀಸ್ ಲ್ಯಾಟಿಮರ್ ಪ್ರಶಸ್ತಿಯನ್ನು ಸಹ ಪಡೆದುಕೊಂಡರು.
ಜಿಇಗೂ ಮೀರಿದ ಜಾಗತಿಕ ವ್ಯವಹಾರಗಳಲ್ಲಿ ಸಹ ಇವರು ವೈವಿಧ್ಯಮಯ ಅನುಭವವನ್ನು ಪಡೆದಿದ್ದಾರೆ. ಇವರು ಬ್ಯಾಂಕ್ ಆಫ್ ಅಮೆರಿಕದ ಯುಎಸ್ ಡೆಬಿಟ್ ಉತ್ಪನ್ನಗಳ ವ್ಯವಹಾರದಲ್ಲಿ ಮುಂದಾಳತ್ವ ವಹಿಸಿದರು, ಇದರಲ್ಲಿ ಅವರು ನವೀನ ರಿವಾರ್ಡ್ಸ್ ಪ್ರೋಗ್ರಾಂ ಅನ್ನು ಪ್ರಾರಂಭಿಸಿದರು, ಪಾವತಿ ತಂತ್ರಜ್ಞಾನದಲ್ಲಿ ಹಲವಾರು ಉಪಕ್ರಮಗಳನ್ನು ಮುನ್ನಡೆಸಿದರು ಮತ್ತು ಗ್ರಾಹಕರಿಗಾಗಿ ಮೌಲ್ಯವನ್ನು ಹೆಚ್ಚಿಸಲು ಬ್ಯಾಂಕಿನಾದ್ಯಂತ ವಿವಿಧ ತಂಡಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದರು.
ಬೋಸ್ಟನ್ನ ಬೈನ್ & ಕಂಪೆನಿಯಲ್ಲಿ ಸ್ಟ್ರಾಟಜಿಕ್ ಕನ್ಸಲ್ಟೆಂಟ್ ಆಗಿ ಬ್ಯಾಂಕಿಂಗ್, ಆಯಿಲ್ ರಿಗ್ಸ್, ಪೇಪರ್, ಪೈಂಟ್, ಸ್ಟೀಮ್ ಬಾಯ್ಲರ್ಸ್ ಮತ್ತು ವೈದ್ಯಕೀಯ ಉಪಕರಣಗಳು ಸೇರಿದಂತೆ ಅನೇಕ ಉದ್ಯಮಗಳಲ್ಲಿ ಇವರು ಕೆಲಸ ಮಾಡಿದರು. ಇವರ ಮೊದಲ ಪಾತ್ರವು ಮುಂಬೈನ ಸಿಟಿ ಬ್ಯಾಂಕ್ನೊಂದಿಗಾಗಿತ್ತು, ಅಲ್ಲಿ ಇವರು ಟ್ರೇಡ್ ಸರ್ವಿಸಸ್ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಬ್ಯಾಂಕ್ ಗ್ಯಾರಂಟಿಗಳು ಮತ್ತು ಸಾಲ ಪತ್ರಗಳನ್ನು ಹೊರಡಿಸಿದರು.
ಅನೀಶ್ ಅವರು ಕಾರ್ನೆಗೀ ಮೆಲನ್ ಟೆಪ್ಪರ್ ಸ್ಕೂಲ್ ಆಫ್ ಬ್ಯುಸಿನೆಸ್ನಿಂದ ಪಿಎಚ್ಡಿ ಪದವಿ ಪಡೆದಿದ್ದು, ಅಲ್ಲಿ ಇವರ ಡಾಕ್ಟರೇಟ್ ಥೀಸಿಸ್ ಕಾರ್ಪೊರೇಟ್ ಆಡಳಿತ ಕ್ಷೇತ್ರದಲ್ಲಾಗಿತ್ತು. ಇವರು ಕಾರ್ನೆಗೀ ಮೆಲನ್ ಸಂಸ್ಥೆಯಿಂದ ಸ್ನಾತಕೋತ್ತರ ಪದವಿಯನ್ನು ಸಹ ಪಡೆದಿದ್ದಾರೆ ಮತ್ತು ಅಹಮದಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಿಂದ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ. ಇವರು ವಿಲಿಯಂ ಲ್ಯಾಟಿಮರ್ ಮೆಲನ್ ಸ್ಕಾಲರ್ಶಿಪ್, ಐಐಎಂಎ (IIMA)ದಲ್ಲಿ ಇಂಡಸ್ಟ್ರಿ ಸ್ಕಾಲರ್ಶಿಪ್, ನ್ಯಾಷನಲ್ ಟ್ಯಾಲೆಂಟ್ ಸರ್ಚ್ ಮತ್ತು ಸರ್ ಡೊರಾಬ್ಜಿ ಟಾಟಾ ಟ್ರಸ್ಟ್ ಸೇರಿದಂತೆ ವಿವಿಧ ಸ್ಕಾಲರ್ಶಿಪ್ಗಳನ್ನು ಇವರು ಪಡೆದುಕೊಂಡಿದ್ದಾರೆ.