ಮಹಿಂದ್ರಾ ಫೈನಾನ್ಸ್‌ನ ಉತ್ಪನ್ನ ಮತ್ತು ಸೇವೆಗಳಲ್ಲಿ ಸಂಪೂರ್ಣವಾಗಿ ತೃಪ್ತಿ ಹೊಂದಿದ್ದೇನೆ. ಈಗಾಗಲೇ ಬಳಕೆಯಾದ ವ್ಯಾಗನ್ ಆರ್ ವಾಹನಕ್ಕಾಗಿ ಸಾಲ ತೆಗೆದುಕೊಳ್ಳುವ ಕುರಿತು ಯೋಚಿಸುತ್ತಿದ್ದೆ. ಪರಿಚಯಸ್ಥರಿಂದ ಮಹಿಂದ್ರಾ ಫೈನಾನ್ಸ್ ಬಗ್ಗೆ ನಾನು ತಿಳಿದುಕೊಂಡೆ. ಮಹೀಂದ್ರಾ ಫೈನಾನ್ಸ್ ಆರ್ಥಿಕವಾಗಿ ಹೆಚ್ಚು ಕಾರ್ಯಸಾಧ್ಯವಾದ ಆಯ್ಕೆಯಾಗಿದ್ದರಿಂದ ನಾನು ಮಹಿಂದ್ರಾ ಫೈನಾನ್ಸ್ ನಲ್ಲಿ ಸಾಲ ತೆಗೆದುಕೊಳ್ಳಲು ನಿರ್ಧರಿಸಿದೆ. ಮಹೀಂದ್ರಾ ಫೈನಾನ್ಸ್ ಒದಗಿಸುವ ಉತ್ಪನ್ನಗಳು ಮತ್ತು ಸೇವೆಯ ಗುಣಮಟ್ಟದಿಂದ ನಾನು ಸಂಪೂರ್ಣವಾಗಿ ತೃಪ್ತಿ ಹೊಂದಿದ್ದೇನೆ. ನನಗೆ ಇನ್ನೂ ಹೆಚ್ಚಿನ ಸಾಲದ ಅಗತ್ಯವಿದ್ದರೆ, ನಾನು ಖಂಡಿತವಾಗಿಯೂ ಮಹಿಂದ್ರಾ ಫೈನಾನ್ಸ್ ಆಯ್ಕೆ ಮಾಡಿಕೊಳ್ಳುತ್ತೇನೆ.
ನಾನು ಮಹಿಂದ್ರಾ ಫೈನಾನ್ಸ್ ನಿಂದ 4 ವಾಹನಗಳಿಗೆ ಸಾಲ ಪಡೆದುಕೊಂಡಿದ್ದೇನೆ. ಇವರ ಸರ್ವಿಸಸ್ ತುಂಬಾ ಚೆನ್ನಾಗಿದೆ. ನಮ್ಮ ಇ ಎಂ. ಐ ಕಲೇಕ್ಟ್ ಮಾಡಲು ಅಧಿಕಾರಿಗಳು ನಮ್ಮಲ್ಲಿಗೆ ಸ್ವತಃ ಬರುತ್ತಾರೆ. ಸಮಯದಲ್ಲಿ NOC ಸಿಕ್ಕಿದೆ. ಇವರ ಬಡ್ದಿ ದರವು ಸಮಂಜಸವಾಗಿದೆ. ನಾನು ಯಾವುದೇ ಸಾಲಕ್ಕಾಗಿ ಮಹಿಂದ್ರಾ ಫೈನಾನ್ಸ ನ್ನೆ ಆಯ್ಕೆ ಮಾಡುತ್ತೇನೆ.
ನಾನು ಎರಡು ವರ್ಷಗಳಿಂದ ಮಹಿಂದ್ರಾ ಫೈನಾನ್ಸ್ ನೊಂದಿಗೆ ವ್ಯವಹರಿಸುತ್ತೇನೆನೆ. ನನ್ನ ಸಂಬಂಧಿಕರು ನನಗೆ ಎಂ. ಎಫ್ ನ್ನು ಸೂಚಿಸಿದರು. ಬೇರೆ ಸಂಸ್ಥೆಗಳೊಂದಿಗೆ ಹೋಲಿಸಿದರೆ ಮಹಿಂದ್ರಾ ಫೈನಾನ್ಸ್ ನ ಬಡ್ಡಿ ದರ ಕಡಿಮೆಯಾಗಿವೆ. ನಾನು ಮಹಿಂದ್ರಾ ಫೈನಾನ್ಸ್ ನ ಸಿಬ್ಬಂದಿಗಳ ಬಗ್ಗೆ ನನಗೆ ತುಂಬಾ ಖುಷಿ ಇದೆ.. ಒಮ್ಮೆ ನನ್ನ ಕುಟುಂಬದಲ್ಲಿ ಯಾವುದೋ ತುರ್ತು ಅಗತ್ಯ ಉಂಟಾಗಿತ್ತು ಮತ್ತು ಇಎಂಐ ಪಾವತಿಸಲು ಸಾಧ್ಯವಾಗಿರಲಿಲ್ಲ. ನಾನು ಅಲ್ಲಿಯ ಸ್ಟಾಫ್ ಮೆಂಬರಿಗೆ ತಿಳಿಸಿದೆ ಅವರು ಯಾವುದೇ ತಕರಾರು ಮಾಡಲಿಲ್ಲ. ನನಗೆ ಇ ಎಂ. ಐ ತುಂಬಿಸುದರಲ್ಲಿ ವಿಳಂಬವಾದರೂ ಅಲ್ಲಿಯ ಸ್ನೇಹಶೀಲ ಸಿಬ್ಬಂದಿಗಳು ಹಣ ಪಡೆಯಲು ಮನೆಗೆ ಬರುತ್ತಾರೆ.
" ನಾನು ಮಹಿಂದ್ರಾ ಫೈನಾನ್ಸ್ ನಿಂದ 2.5 ವರ್ಷದ ಮೊದಲು ನನ್ನ ಕಾರ್ ತೆಗೆದು ಕೊಳ್ಳಲು ಸಾಲವನ್ನು ಪಡೆದಿದ್ದೆ. ಅವರ ಸಾಲ ವಿತರಣೆಯ ಸಮಯವು ತುಂಬಾ ಶೀರ್ಘ್ರವಾಗಿದೆ. ಕೇವಲ 3 ದಿನದೊಳಗೆ ಹಣ ನನ್ನ ಕೈಸೇರಿತ್ತು. ಇಲ್ಲಿಯ ಶಾಖೆಯೊಂದಿಗಿನ ನನ್ನ ಅನುಭವ ಆನಂದದಾಯಕವಾದದ್ದು.ನಾನು ಇ ಎಂ. ಐ ಪಾವತಿಸಲು ಕಾಯಬೇಕಾಗಿಲ್ಲ, ಇದ್ರಿಂದ ನಾನು ನಿಶ್ಚಿಂತತೆಯಿಂದಿದ್ದು ನನ್ನ ಸಮಯವು ಉಳಿಯುತ್ತದೆ. ಮಹಿಂದ್ರಾ ಫೈನಾನ್ಸ ನೊಂದಿಗಿನ ಎಲ್ಲಾ ವ್ಯವಹಾರಗಳ ಅನುಭವ ನನಗೆ ಖುಷಿ ಕೊಟ್ಟಿದೆ.
" ನಾನು 2-3 ವರ್ಷದ ಮೊದಲು ಮಹಿಂದ್ರಾ ಫೈನಾನ್ಸ್ ನಿಂದ ನನ್ನ ಬಿಸಿನೆಸ್ ಸೆಟ್ಟ್ ಮಾಡಲು ಸಾಲ ಪಡೆದಿದ್ದೇನೆ. ಇದು ನಾನು ಮೂರನೇ ಸಲ ಮಹಿಂದ್ರಾ ಫೈನಾನ್ಸ್ ನಿಂದ ಸಾಲ ಪಡೆಯುವುದು. ನಾನು ಇವರ ಸುಲಭವಾದ ಪ್ರೋಸೆಸಿಂಗ್ ಸಿಸ್ಟಮನ್ನು ತುಂಬಾ ಲೈಕ್ ಮಾಡ್ತೇನೆ. ಅದಲ್ಲದೆ ವಿತರಣ ಅವಧಿಯು ತುಂಬಾ ಶೀರ್ಘ್ರವಾಗಿದೆ. ನನ್ನ ಪರವಾಗಿ ಸಹಾಯಮಾಡಿದ ಇವರ ಬ್ರಾಂಚ್ ನೆಟ್ ವರ್ಕ ನನ್ನ ಮೇಲೆ ತುಂಬಾ ಪ್ರಭಾವ ಬೀರಿದೆ. ನಾನು ಬಿಹಾರಿನಿಂದ ಸಾಲ ಪಡೆದಿದ್ದೆ ಆದ್ರೆ ನನ್ನ ಸುವಿಧಾದ ಪ್ರಕಾರ ಈಗ ದೆಹಲಿ ಬ್ರಾಂಚನಲ್ಲಿ ಇ ಎಂ. ಐ ಕಟ್ಟುತ್ತಿದ್ದೇನೆ
ನಾನು ಸುರೇಶ್ , ಕೃಷಿಕ ಕುಟುಂಬದಿಂದ ಬಂದವನು. ನಾನು ಸ್ವತಃ ನನ್ನ ಟ್ರಾವೆಲ್ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದಾಗ ನಾನು ಅಸಹಾಯಕನಾಗಿದ್ದೆ. ಮಹಿಂದ್ರಾ ಫೈನಾನ್ಸ್ ನನಗೆ ಅಗತ್ಯವಿರುವ ಸಾಲ ನೀಡುವ ಮೂಲಕ ಬೆಂಬಲ ನೀಡಿತು. ಇದರಿಂದ ನಾನು ಮಹಿಂದ್ರಾ ಟೂರಿಸ್ಟರ್ ಖರೀದಿಸಿದೆ. ನನ್ನ ಟ್ರಾವೆಲ್ ವ್ಯವಹಾರ ಚೆನ್ನಾಗಿ ನಡೆಯುತ್ತಿದೆ, ಆದ್ರಿಂದಾಗಿ ಈಗ ನಾನು ನನ್ನ ಕುಟುಂಬದ ಕೃಷಿ ವ್ಯವಹಾರದ ಕಡೆ ಗಮನಹರಿಸಿದ್ದೇನೆ. ನಾನು ನನ್ನ ಸಾಲದ ಕಂತನ್ನು ಸಕಾಲಿಕವಾಗಿ ಕೊಡುವುದರಿಂದ ಮಹಿಂದ್ರಾ ಫೈನಾನ್ಸ್ ತಾನಾಗಿ ನನಗೆ ಟ್ರಾಕ್ಟರ್ ಖರೀದಿಸಲು ಸಾಲ ತೆಗೆದುಕೊಳ್ಳುವ ಇನ್ನೊಂದು ಅವಕಾಶವನ್ನು ಒದಗಿಸಿದೆ. ನಾನು ನನ್ನ ಆಪ್ತರಿಗೆ ಯಾವುದೇ ಅಗತ್ಯತೆಗೆ ಮಹಿಂದ್ರಾ ಫೈನಾನ್ಸ್ ನಿಂದ ಸಾಲ ಪಡೆಯಲು ಶಿಫಾರಸು ಮಾಡಿದ್ದೇನೆ. ಮಹಿಂದ್ರಾ ಫೈನಾನ್ಸ್ ನ ಬೆಂಬಲದಿಂದ ನನ್ನ ಟ್ರಾವೆಲ್ ಹಾಗೂ ಕೃಷಿಕ ವ್ಯವಹಾರ ತುಂಬಾ ಅಭಿವೃದ್ಧಿಹೊಂದಿದೆ. "
ನಾನು ಕೃಷಿಕ ಕುಟುಂಬದಿಂದ ಬಂದವನು. ನಾನು ಟ್ರ್ಯಾಕ್ಟರ್ ಖರೀದಿಸಬೇಕು ಎನ್ನುವ ಇಚ್ಛೆಯನ್ನು ನನ್ನ ಸ್ನೇಹಿತನಲ್ಲಿ ಹೇಳಿಕೊಂಡೆ. ಅವರು ಮಹಿಂದ್ರಾ ಫೈನಾನ್ಸ್ ನ ಗ್ರಾಹಕರಾಗಿದ್ದು ನನ್ನನ್ನು ಬ್ಯಾಂಕಿನ ಟ್ರ್ಯಾಕ್ಟರ್ ಲೋನ್ ಕಂಪೆನಿಗೆ ಪರಿಚಯಿಸಿಕೊಟ್ಟರು. ಬ್ಯಾಂಕಿನ ತಂಡವು ನನಗೆ ತಕ್ಷಣ ಸಾಲವನ್ನು ಬಿಡುಗಡೆ ಮಾಡಿತು. ಒಂದು ವಾರದ ಒಳಗೆ ನನಗೆ ಟ್ರ್ಯಾಕ್ಟರ್ ಲಭ್ಯವಾಯಿತು. ಟ್ರಾಕ್ಟರ್ ನ ಬಳಕೆಯಿಂದ ನನ್ನ ಆದಾಯವು ಹೆಚ್ಚಾಗಿದೆ. ನಾನು ಸಾಲದ ಮರುಪಾವತಿಯನ್ನು ನಿಯತವಾಗಿ ಮಾಡುತ್ತೇನೆ. ನಾನು ಬರುವ ವರ್ಷದೊಳಗೆ ಇನ್ನೊಂದು ಟ್ರಾಕ್ಟರನ್ನು ಖರೀದಿಸುವ ಅಲೋಚನೆಯಲ್ಲಿದ್ದೇನೆ ಅದಕ್ಕೂ ಮಹಿಂದ್ರಾ ಫೈನಾನ್ಸ್ ನಿಂದಲೆ ಸಾಲವನ್ನು ತೆಗೆದುಕೊಳ್ಳುತ್ತೇನೆ.
ನಾನು ತಿಂಗಳ ಸಂಬಳ ಮತ್ತು ಕನಿಷ್ಟ ಆದಾಯ ಗಳಿಸುವ ಡ್ರೈವರ್ ಆಗಿದ್ದೆ. ನಾನು ಯಾವಾಗಲೂ ಸ್ವಂತ ವಾಹನ ಖರೀದಿಸುವ ಕನಸು ಕಾಣುತ್ತಿದ್ದೆ ಮತ್ತು ಆ ಕನಸು ಮಹಿಂದ್ರಾ ಫೈನಾನ್ಸ್‌ನ ಬೆಂಬಲದೊಂದಿಗೆ ನನಸಾಯಿತು. ನಾನು ಹ್ಯುಂಡೈಇಯಾನ್ ಖರೀದಿಸಲು ಮತ್ತು ಒಬ್ಬ ಮಾಲೀಕ ಕಮ್ ಡ್ರೈವರ್ ಆಗಿ ಜೀವನ ಆರಂಭಿಸಲು ಸಾಧ್ಯವಾಯಿತು ಮತ್ತು ಈಗ ನನ್ನ ಆದಾಯ ಸಾಕಷ್ಟು ಹೆಚ್ಚಳವಾಗಿದೆ. ನಾನು ಕಂತುಗಳನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡುತ್ತಿದ್ದೆ ಮತ್ತು ಗೌರವದೊಂದಿಗೆ ನನ್ನ ಸಾಲ ಚುಕ್ತಾ ಮಾಡಿದೆ. ನಾನು ನನ್ನ ವಾಹನದ ಮೇಲೆ ಪೂರ್ವ ಅನುಮೋದಿತ (ಪ್ರೀ ಎಪ್ರೂವ್ಡ್) ಸಾಲಕ್ಕೂ ಸಹ ಅರ್ಹನಾಗಿದ್ದೇನೆ. ಇದು ನನಗೆ ಭದ್ರತೆಯ (ಸುರಕ್ಷತೆಯ) ಭಾವವನ್ನು ನೀಡುತ್ತದೆ.
ನಾನು ಕುಟ್ಯಾಡಿ ಪಟ್ಟಣದಲ್ಲಿ ಅಂಗಡಿ ಇಟ್ಟುಕೊಂಡಿದ್ದೆ ಮತ್ತು ನಮ್ಮ ಕುಟುಂಬ ಉತ್ತಮ ಹಿನ್ನೆಲೆ ಹೊಂದಿತ್ತು. ನಾನು ಯಾವಾಗಲೂ ಸ್ವಂತ ಮನೆಯ ಕನಸು ಕಾಣುತ್ತಿದ್ದೆ, ಆದರೆ ಆರ್ಥಿಕ ಬಿಕ್ಕಟ್ಟು ಮತ್ತು ಇತರ ಪರಿಸ್ಥಿತಿಗಳಿಂದಾಗಿ, ನನ್ನ ಕನಸನ್ನು ಸಾಕಾರ ಮಾಡಿಕೊಳ್ಳುವಷ್ಟು ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನನ್ನ ಸಂಕಷ್ಟದ ಸಮಯದಲ್ಲಿ ಮಹಿಂದ್ರಾ ಫೈನಾನ್ಸ್ ನೆರವಿಗೆ ಬಂತು ಮತ್ತು ನನ್ನ ಮಹಿಂದ್ರಾ ಸುಜುಕಿ ಡಿಜೈರ್ ವಿಡಿಐ ಮೇಲೆ ಪ್ರಸ್ತುತ ಇರುವ ಸಾಲಕ್ಕೆ ಟಾಪ್ ಅಪ್ ಸಾಲ ಒದಗಿಸುವ ಪ್ರಸ್ತಾಪ ಮಾಡಿತು, ಅದರಿಂದ ನಾನು ಮನೆ ಕಟ್ಟಿಕೊಂಡು ನನ್ನ ಕಸನು ನನಸು ಮಾಡಿಕೊಂಡೆ.
ನಾನು 2014ರವರೆಗೆ ನಡುವಣ್ಣೂರಿನಲ್ಲಿ ಟ್ಯಾಕ್ಸಿ ಚಾಲಕ ಕಮ್ ಓನರ್ ಆಗಿದ್ದೆ.ನಾನು ಮಹಿಂದ್ರಾ ಫೈನಾನ್ಸ್ ಒದಗಿಸಿದ ಸಾಲದಿಂದ ಚೆವ್ರೊಲೆಟ್ಟವೇರಾ ಖರೀದಿಸಿದೆ.ಕುಟುಂಬದಲ್ಲಿ ಹಿರಿಯ ಮಗನಾದ ಕಾರಣ, ತಂಗಿಯರಿಗೆ ಮದುವೆಮಾಡಿಸಬೇಕಾದ ಜವಾಬ್ದಾರಿ ನನ್ನ ಮೇಲಿತ್ತು. ನಾನು ಹಣಕ್ಕಾಗಿ ಹಲವು ಮೂಲಗಳನ್ನು ಸಂಪರ್ಕಿಸಿದೆ ಆದರೆಯಾರೂ ಸಹಾಯ ಮಾಡಲಿಲ್ಲ ಆಗ ಮಹಿಂದ್ರಾ ಫೈನಾನ್ಸ್ ನ ವಾಹನದ ಮೇಲೆ ಸಾಲ ನೀಡಿತು. ನನ್ನ ತಂಗಿಯ ನಿಶ್ಚಿತಾರ್ಥವನ್ನು ಚೆನ್ನಾಗಿ ಮಾಡಲು ಸಾಧ್ಯವಾಯಿತು.
"ನನಗೆ ಮಹಿಂದ್ರಾ ಫೈನಾನ್ಸ್ ನ ಪರಿಚಯ ನನ್ನ ತಂದೆಯಿಂದ ಆಯಿತು. ಅವರು ಮೊದ್ಲಿಂದ ಮಹಿಂದ್ರಾ ಫೈನಾನ್ಸ್ ನ ಗ್ರಾಹಕರಾಗಿದ್ದರು. ಕೇರಳದಲ್ಲಿ ನನ್ನ ಬಿಸಿನೆಸ್ ಚೆನ್ನಾಗಿ ನಡೆಯುತ್ತಿತ್ತು. ಆದ್ರೆ ಕೇರಳದಲ್ಲಿಯ ಫ್ಲಾಡ್ ನ ನಂತರ ನನ್ನ ವ್ಯವಹಾರ ಕಡಿಮೆಯಾಯಿತು. ಆವಾಗ ನಾನು ಮಹಿಂದ್ರಾ ಫೈನಾನ್ಸನ್ನು ಭೇಟಿ ನೀಡಿದೆ ನನ್ನ ತಂದೆಯ ಸಾಲದ ಅವಧಿಯಲ್ಲಿ ಅವರ ನಂಬಿಕೆ ಹಾಗೂ ಸರ್ವಿಸಸ್ ನ ಆಧಾರದ ಮೇಲೆ ನನಗೆ ಮೂರು ಜನ್ರೆಟರ್ ಖರೀದಿಸಲು ಸಾಲ ನೀಡಿದರು. ಈ ಸಹಾಯದಿಂದ ಮತ್ತೆ ನನ್ನ ಬಿಸಿನೆಸ್ ಬೆಳೆಯಿತು. ಈಗ ನಾನು ಇಂಟರ್ ನ್ಯಾಶನಲ್ ಮಾರ್ಕೆಟಲ್ಲಿ ಕೂಡಾ ನನ್ನ ಉತ್ಪನ್ನಗಳನ್ನು ಎಕ್ಪೋರ್ಟ್ ಮಾಡುತ್ತೇನೆ.
ನಾನು ವಡೋದರಾದಲ್ಲಿ ವಾಸಿಸುತ್ತೇನೆ ಮತ್ತು ಒಂದು ಕಂಪನಿಯಲ್ಲಿ ಮೇಂಟೇನನ್ಸ್ಮ್ಯಾನೇಜರ್ ಮೆಂಟೇನನ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತೇನೆ. 2017ರಲ್ಲಿ ನಾನು ಮಹಿಂದ್ರಾ ಫೈನಾನ್ಸ್‌ನಿಂದ ಸಾಲ ತೆಗೆದುಕೊಂಡೆ. ಸಾಲವನ್ನು ವೇಗವಾಗಿ ಮತ್ತು ಸುಲಭವಾಗಿ ವಿತರಣೆ ಮಾಡಲಾಯಿತು. ಸಾಲದ ಅವಧಿಯಲ್ಲಿ ಯಾವುದೇ ಸಮಸ್ಯೆ ಎದುರಾದರೆ, ಸಿಬ್ಬಂದಿ ಸರಳ ಮತ್ತು ವೇಗವಾದ ಪರಿಹಾರ ನೀಡುತ್ತಾರೆ.
ನಾನು ಮಹಿಂದ್ರಾ ಫೈನಾನ್ಸ್ ಜೊತೆಗೆ 2ರಿಂದ 3 ವರ್ಷಗಳಿಂದ ಜೊತೆಯಿದ್ದೇನೆ. ನನಗೆ 2-3 ದಿನಗಳಲ್ಲಿ ಸಾಲದ ಒಪ್ಪಿಗೆ ದೊರೆತಿದೆ ಮತ್ತು ವಾರದಲ್ಲಿ ಸಾಲ ವಿಲೇವಾರಿ ಆಗಿದೆ. ವೈಯಕ್ತಿಕವಾಗಿ ನನಗೆ ಸಂಪೂರ್ಣ ಬೆಂಬಲ ದೊರೆತಿದೆ. ಇದರಿಂದ ಸಾಲವನ್ನು ಪಡದುಕೊಳ್ಳಲು ಸುಲಭಸಾಧ್ಯವಾಯಿತು. ನಾನು ಮಹಿಂದ್ರಾ ಫೈನಾನ್ಸ್ ಅನ್ನು ಇತರರಿಗೂ ಶಿಫಾರಸ್ಸು ಮಾಡುತ್ತೇನೆ ಮತ್ತು ನಾನೂ ಅದರೊಂದಿಗೆ ಮುಂದುವರಿಯುತ್ತೇನೆ.
ನಾನು 10 -12 ವರ್ಷಗಳಿಂದ ಮಹಿಂದ್ರಾ ಫೈನಾನ್ಸ್ ಜೊತೆಗೆ ವ್ಯವಹಾರ ನಡೆಸುತ್ತಿದ್ದೇನೆ. ನನ್ನ ಅನುಭವ ಬಹಳ ಚೆನ್ನಾಗಿದೆ ಒಮ್ಮೆ ನನ್ನ ಸಾಲದ ಅವಧಿಯಲ್ಲಿ, ವೈಯಕ್ತಿಕ ಕಾರಣಗಳಿಂದಾಗಿ 2 ತಿಂಗಳು ನನಗೆ ಇಎಂಐ ಪಾವತಿ ಮಾಡಲು ಸಾಧ್ಯವಾಗಲಿಲ್ಲ ಮತ್ತು ಮಹಿಂದ್ರಾ ಫೈನಾನ್ಸ್ ನೊಂದಾಣಿಕೆ ಮಾಡಿಕೊಂಡಿತು. ನಾನು ಈಗ ನನ್ನ ವಾಹನಕ್ಕೆ ಮರುಸಾಲ ಪಡೆಯಲು ಯೋಚಿಸುತ್ತಿದ್ದೇನೆ, ಅದನ್ನು ನಾನು ಕೇವಲ ಮಹಿಂದ್ರಾ ಫೈನಾನ್ಸ್ ನಿಂದ ಮಾತ್ರ ಪಡೆದುಕೊಳ್ಳಲು ಯೋಚಿಸುತ್ತಿದ್ದೇನೆ.
"ನನ್ನ ತಂದೆಯು ಪಾಶ್ಚರೀಕರಿಸಿದ ಹಾಲಿನ ವ್ಯಾಪಾರವನ್ನು ಹೊಂದಿದ್ದರು ಮತ್ತು ನಾನು ಅದನ್ನು ವಿಸ್ತರಿಸಲು ಬಯಸಿದೆ ಮತ್ತು ಐಸ್‌ಕ್ರೀಮ್ ಹಾಗೂ ಕುಲ್ಫಿ ತಯಾರಿಕಾ ಉದ್ಯಮವನ್ನಾಗಿಸಲು ನಿರ್ಧರಿಸಿದೆ. ಆದಾಗ್ಯೂ ಸುಲಭವಾಗಿ ಸಾಲ ದೊರೆಯಲಿಲ್ಲ. ನಾನು ಹಲವಾರು ಬ್ಯಾಂಕುಗಳಲ್ಲಿ ಅರ್ಜಿ ಸಲ್ಲಿಸಿದೆ ಮತ್ತು ನನ್ನ ಪ್ರಕರಣವು 3-4 ತಿಂಗಳುಗಳವರೆಗೆ ಬಾಕಿ ಉಳಿಯಿತು.
ನಂತರ ನಾನು ಮಹೀಂದ್ರ ಫೈನಾನ್ಸ್ ಅನ್ನು ಸಂಪರ್ಕಿಸಿದೆ. ಅವರು ನನ್ನ ಫ್ಯಾಕ್ಟರಿಗೆ ಭೇಟಿ ನೀಡಿದರು, ದಸ್ತಾವೇಜುಗಳನ್ನು ಪರಿಶೀಲಿಸಿದರು ಮತ್ತು ಹತ್ತು ದಿನಗಳಲ್ಲಿ ನನ್ನ ಸಾಲವನ್ನು ಮಂಜೂರು ಮಾಡಿದರು! ಇಂದು ನನ್ನ ಹಲವಾರು ಉತ್ಪನ್ನಗಳು ಭಾರತದ ಉನ್ನತ ಬ್ರ್ಯಾಂಡ್‌ಗಳೊಂದಿಗೆ ಸಮಾನವಾಗಿ ನಿಂತಿವೆ"
"ನಾನು ಒಂದು ಯಂತ್ರ, ಒಬ್ಬ ಕಾರ್ಯನಿರ್ವಾಹಕ ಮತ್ತು ಐದು ಕ್ರಾಂಕ್ಶಾಫ್ಟ್ ಯಂತ್ರಗಳ ಸಾರ್ಥ್ಯದೊಂದಿಗೆ ಪ್ರಾರಂಭಿಸಿದೆ, ನಂತರ ನಮಗೆ ಸ್ವಯಂಚಾಲಿತ ಯಂತ್ರಗಳ ಸ್ಥಾಪನೆಗೆ ಅಗತ್ಯವಾಗಿದ್ದ ಪ್ರಮುಖ ಕಾರ್ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡೆವು.
ಇದಕ್ಕಾಗಿ ನನಗೆ ಸುಸ್ಥಿರ ಆರ್ಥಿಕ ಪರಿಹಾರದ ಅಗತ್ಯವಿತ್ತು. ಆಗ ನಾನು ಮಹೀಂದ್ರ ಫೈನಾನ್ಸ್ ಅನ್ನು ಸಂಪರ್ಕಿಸಿದೆ. ಅವರು ನನ್ನ ವ್ಯವಹಾರವನ್ನು ಸರಿಯಾಗಿ ಅವಲೋಕನ ಮಾಡಿದರು ಮತ್ತು ನನ್ನ ಅಗತ್ಯಕ್ಕೆ ತಕ್ಕಂತಹ ತಂತ್ರವನ್ನು ವಿನ್ಯಾಸಗೊಳಿಸಿದರು. ಇಂದು ನಾನು ಸಾಲ ತೆಗೆದುಕೊಂಡು ನನ್ನ ಉತ್ಪಾದನೆಯ ಸಾಮರ್ಥ್ಯವು ನಾಲ್ಕು ಪಟ್ಟು ಹೆಚ್ಚಾಗಿದೆ ಮತ್ತು ಮಾರುಕಟ್ಟೆಯಲ್ಲಿ ನನಗೆ ಅವಕಾಶ ನೀಡುವಂತಹ ಇತ್ತೀಚಿನ ತಂತ್ರಜ್ಞಾನಗಳನ್ನು ಇದರಲ್ಲಿ ಅಳವಡಿಸಲಾಗಿದೆ. "
"ನನ್ನ ಮಟ್ಟಿಗೆ ಸಾಲ ತೆಗೆದುಕೊಂಡು ವ್ಯವಹಾರವನ್ನು ವಿಸ್ತರಿಸುವುದು ಕನಸಿನ ಮಾತಾಗಿತ್ತು. ಎಂಜಿನಿಯರಿಂಗ್ ಮತ್ತು ವಾಹನದ ಬಿಡಿಭಾಗಗಳೊಂದಿಗೆ ವ್ಯವಹಾರ ನಡೆಸುತ್ತಿದ್ದ ನನಗೆ ಎರಡು ಸಿಎನ್‌ಸಿ ಯಂತ್ರಗಳಿಗಾಗಿ ಹಣದ ಅಗತ್ಯವಿತ್ತು. ಯಾವುದೇ ಬ್ಯಾಂಕ್ ನನಗೆ ಸಾಲ ನೀಡಲು ಸಿದ್ಧವಿರಲಿಲ್ಲ ಮತ್ತು ಸಾಲ ನೀಡಲು ಸಿದ್ಧವಿದ್ದರೂ ಅವು ಭಾರೀ ಪ್ರೀಮಿಯಮ್ ಶುಲ್ಕವನ್ನು ವಿಧಿಸುತ್ತಿದ್ದವು.
ನಂತರ ನಾನು ಮಹೀಂದ್ರ ಫೈನಾನ್ಸ್‌ನಲ್ಲಿನ ತಂಡವನ್ನು ಸಂಪರ್ಕಿಸಿದೆ. ಅವರು ನನ್ನ ವ್ಯವಹಾರವನ್ನು ವಿವರವಾಗಿ ವಿಶ್ಲೇಷಿಸಿದರು ಮತ್ತು ಕೆಲವು ದಾಖಳೆಗಳ ಪರಿಶೀಲನೆನಂತರ ಅವರು ನನಗೆ ಸಾಲ ಒದಗಿಸಿದರು."
"ನನು ಕಳೆದ 15 ವರ್ಷಗಳಿಂದ ಡೈರಿ ವ್ಯವಹಾರದಲ್ಲಿದ್ದೇನೆ. ನಾನು ಪ್ರತಿ ತಿಂಗಳು ಸುಮಾರು 30,000 ರೂ. ಗಳಿಸುತ್ತೇನೆ ಮತ್ತು ಪ್ರಸ್ತತವಾಗಿ ನನ್ನ ವ್ಯವಹಾರಕ್ಕಾಗಿ ಎರಡು ಮಹೀಂದ್ರ ಪಿಕ್‌ಅಪ್ ಸಾಲವನ್ನು ಹೊಂದಿದ್ದೇನೆ. ಮಹೀಂದ್ರ ಫೈನಾನ್ಸ್‌ನೊಂದಿಗಿನ ನನ್ನ ಇಲ್ಲಿಯವರೆಗಿನ ಅನುಭವವು ಅದ್ಭುತವಾಗಿದೆ. ಕಾರ್ಯನಿರ್ವಾಹಕರು ತುಂಬಾ ಸಹಾಯ ಮಾಡುತ್ತಾರೆ ಮತ್ತು ಸಾಲಗಳಿಗಾಗಿ ನಾನು ಎಂದೂ ಕಾಯುವಂತಾಗಿಲ್ಲ. ಅಷ್ಟಲ್ಲದೇ, ನನ್ನ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಅವರು ನನ್ನ ಸಾಲದ ಅವಧಿಯನ್ನು ಆರು ವರ್ಷಗಳಿಗೆ ಮುಂದೂಡಿದರು ಮತ್ತು ದಂಡದ ಶುಲ್ಕಗಳನ್ನು ಕಡಿಮೆ ಮಾಡಿದರು.
ಸಾಲ ತೆಗೆದುಕೊಳ್ಳುವುದಕ್ಕಿಂತ ಮೊದಲು ನಾನು ಹಾಲನ್ನು ಬೈಕ್ ಮೂಲಕ ಪೂರೈಸುತ್ತಿದ್ದೆ. ಆದರೆ ನಂತರ ನನ್ನ ಹಳ್ಳಿಗೆ ಹಾಲನ್ನು ಪೂರೈಸಲು ಹೆಚ್ಚು ಹೆಚ್ಚು ಕಷ್ಟವಾಗಲಾರಂಭಿಸಿತು. ಆಗ ನಾನು ಮಹೀಂದ್ರ ಪಿಕ್‌ಅಪ್ ಖರೀದಿಸಲು ನಿರ್ಧರಿಸಿದೆ ಮತ್ತು ಸಾಲಕ್ಕಾಗಿ ಮಹೀಂದ್ರ ಫೈನಾನ್ಸ್ ಅನ್ನು ಸಂಪರ್ಕಿಸಿದೆ. ಅವರು ನನ್ನ ಅಗತ್ಯತೆಯನ್ನು ತಕ್ಷಣ ಅರ್ಥಮಾಡಿಕೊಂಡಂತೆ ಕಂಡಿತು ಮತ್ತು ತ್ವರಿತ ಸಾಲದ ವಿತರಣೆಯನ್ನು ಪಡೆಯಲು ನನಗೆ ಸಹಾಯ ಮಾಡಿದರು. ಪಿಕ್‌ಅಪ್ ಬಂದ ನಂತರ ನನ್ನ ವ್ಯವಹಾರವು ಐದು ಪಟ್ಟು ಬೆಳೆದಿದೆ ಮತ್ತು ಅಂದಿನಿಂದ ಪ್ರಚಂಡ ವೇಗದಲ್ಲಿ ಬೆಳೆಯುತ್ತಿದೆ. ವಾಸ್ತವವಾಗಿ, ಈಗ ನಾನು ಚೆನ್ನಾಗಿ ಗಳಿಸುತ್ತಿದ್ದೇನೆ, ನಾನು ಕುಂಟುಂಬಕ್ಕಾಗಿ ಕಾರನ್ನು ಖರೀದಿಸಲು ಬಯಸುತ್ತಿದ್ದೇನೆ ಮತ್ತು ಕೆಲವು ವರ್ಷಗಳ ನಂತರ ಮನೆಯ ಸಾಲವನ್ನೂ ತೆಗೆದುಕೊಳ್ಳುತ್ತೇನೆ.
ಈಗ ಜನರು ಸಾಲಗಳ ಬಗ್ಗೆ ನನ್ನ ಸಲಹೆಯನ್ನು ಕೇಳಿದಾಗ ನಾನು ಒಂದೇ ಒಂದು ಹೆಸರನ್ನು ಶಿಫಾರಸು ಮಾಡುತ್ತೇನೆ - ಮಹೀಂದ್ರ ಫೈನಾನ್ಸ್."
"ನಾನು ಎಂಟು ವರ್ಷಗಳವರೆಗೆ ನಿರ್ಮಾಣ ಕಂಪನಿಯೊಂದಿಗಿದ್ದೆ. 2004ರಲ್ಲಿ ಉದ್ಯೋಗವನ್ನು ಬಿಟ್ಟೆ ಮತ್ತು ಕೆಲವು ಸ್ನೇಹಿತರೊಂದಿಗೆ ಉಪಗುತ್ತಿಗೆ ಮಾಡಲಾರಂಭಿಸಿದೆ. ಮೂರು ವರ್ಷಗಳ ನಂತರ ನಾನು ವಿಸ್ತರಿಸಲು ನಿರ್ಧರಿಸಿದೆ. ಹೀಗಾಗಿ ನಾನು, ಸಾರಿಗೆ ಮತ್ತು ಮಾರಾಟದ ಉದ್ದೇಶಗಳಿಗಾಗಿ ವಾಹನವನ್ನು ಖರೀದಿಸಲು ಮಹೀಂದ್ರ ಫೈನಾನ್ಸ್‌ನಿಂದ ವಾಣಿಜ್ಯ ವಾಹನ ಸಾಲ ಪಡೆದೆ. ನಾನು ಹೆಚ್ಚಿನ ಗ್ರಾಹಕರನ್ನು ಭೇಟಿ ಮಾಡುತ್ತಿರುವಂತೆ ಮತ್ತು ಅವರಿಗೆ ಉತ್ತಮ ಸೇವೆ ಒದಗಿಸುತ್ತಿರುವಂತೆ ಶೀಘ್ರದಲ್ಲಿಯೇ ನನ್ನ ಪಾಲುದಾರಿಕಾ ಸಂಸ್ಥೆಯು ಬೆಳೆಯಿತು.
2009ರಲ್ಲಿ ನಾನು ನನ್ನ ಸ್ವಂತ ಕಂಪನಿಯನ್ನು ಆರಂಭಿಸಿದೆ ಮತ್ತು ಇನ್ನೊಂದು ವಾಹನವನ್ನು ಖರೀದಿಸುವ ಅಗತ್ಯ ಉಂಟಾಯಿತು. ನಮ್ಮ ಉತ್ತಮ ಬಾಂಧವ್ಯವನ್ನು ಪರಿಗಣಿಸಿ ನನ್ನ ಇನ್ನೊಂದು ವಾಣಿಜ್ಯ ವಾಹನ ಸಾಲಕ್ಕಾಗಿ ಮತ್ತೆ ಮಹೀಂದ್ರ ಫೈನಾನ್ಸ್ ಅನ್ನು ಅವಲಂಬಿಸಲು ನಾನು ನಿರ್ಧರಿಸಿದೆ.
ಕೆಲವು ವರ್ಷಗಳ ಹಿಂದೆ ನಾನು ಕೇವಲ ಉದ್ಯೋಗಿಯಾಗಿದ್ದೆ. ಇಂದು, ನನ್ನ ಕಂಪನಿ, ಪ್ರಣತಿ ಎಂಜಿನಿಯರಿಂಗ್ ಸರ್ವೀಸಸ್, ಪ್ರೇರಣೆ ಪಡೆದ 200 ಕ್ಕಿಂತ ಹೆಚ್ಚು ವ್ಯಕ್ತಿಗಳ ಒಂದು ಕುಟುಂಬವಾಗಿದೆ. ನಾನು ಈಗ ನಿರ್ಮಾಣ ಸೇವೆಗಳಲ್ಲಿ ವಿಸ್ತರಿಸಲು ಬಯಸುತ್ತೇನೆ ಮತ್ತು ಉಪ-ಗುತ್ತಿಗೆದಾರನಿಂದ ಗುತ್ತಿಗೆದಾರನಾಗಲು ಬಯಸುತ್ತೇನೆ. ನನ್ನ ಸಾಮರ್ಥ್ಯದಲ್ಲಿ ನಂಬಿಕೆಯಿಟ್ಟ ಮತ್ತು ನನ್ನ ಪ್ರಯಾಣದುದ್ದಕ್ಕೂ ನನಗೆ ಸಹಾಯ ಮಾಡಿದ ಸ್ನೇಹಿತರಿಗೆ ಮತ್ತು ಮಹೀಂದ್ರ ಫೈನಾನ್ಸ್‌ನಂತಹ ಸಂಸ್ಥೆಗಳಿಗೆ ಧನ್ಯವಾದಗಳು."
"ನಾನು ಆರು ವರ್ಷಗಳ ಕಾಲ ಮುಂಬೈಯಲ್ಲಿ ಟ್ಯಾಕ್ಸಿ ಚಾಲಕನಾಗಿದ್ದೆ. ಆದರೆ ಹಣದ ಅಗತ್ಯತೆಯು ನಾನು ತಾಯಿನಾಡನ್ನು ಬಿಟ್ಟು ಜೀವನಕ್ಕಾಗಿ ಗಳಿಸಲು ಸೌದಿ ಅರೇಬಿಯಾದಲ್ಲಿ ಅಲೆಯುವಂತೆ ಮಾಡಿತು. ನಾನಲ್ಲಿ ಖಾಸಗಿ ಕಾರಿನ ಚಾಲಕನಾಗಿ ಕೆಲಸ ಮಾಡಿದೆ ಮತ್ತು ಆರ್ಥಿಕವಾಗಿ ಚೆನ್ನಾಗಿ ಸಂಪಾದಿಸಿದೆ. ಆದರೆ ನನಗೆ ತಾಯಿನಾಡಿನಲ್ಲಿ ಕೆಲಸ ಮಾಡುವ ಆನಂದವನ್ನು ಹಣವು ನೀಡಲಿಲ್ಲ.
ಐದು ವರ್ಷಗಳ ನಂತರ ನಾನು ಮನೆಗೆ ಹಿಂದಿರುಗಲು ನಿರ್ಧರಿಸಿದೆ. 1 ಲಕ್ಷ ರೂ. ಗಳ ಉಳಿತಾಯದೊಂದಿಗೆ ನಾನು ಹೈದ್ರಾಬಾದ್‌ನಲ್ಲಿಕಚ್ಚಾಸರಕುಗಳೊಂದಿಗೆ ವ್ಯವಹರಿಸುವ ವ್ಯವಹಾರವನ್ನು ಆರಂಭಿಸಿದೆ. ಆದರೆ ನಂತರದಲ್ಲಿ ಅದು ಉತ್ತಮವಾಗಿ ನಡೆಯುತ್ತಿರಲಿಲ್ಲ ಮತ್ತು ನಾನು ಈ ವ್ಯವಹಾರದಲ್ಲಿ ನನ್ನೆಲ್ಲಾ ಹಣವನ್ನೂ ಕಳೆದುಕೊಂಡೆ. ನನ್ನ ಆತ್ಮವಿಶ್ವಾಸದ ಮೇಲೆ ದೊಡ್ಡ ಪೆಟ್ಟು ಬಿತ್ತು ಮತ್ತು ನಾನು ಮೊದಲಿದ್ದ ಸಾಮಾನ್ಯ ಟ್ಯಾಕ್ಸಿ ಚಾಲಕನ ಸ್ಥಾನಕ್ಕೆ ಮರಳುವಂತಾಯಿತು. ಆದರೆ ನನ್ನ ಮನಸ್ಸಿನಲ್ಲಿ ಪ್ರಯತ್ನಪಡುವವರು ಎಂದೂ ವಿಫಲರಾಗುವುದಿಲ್ಲ ಎಂದು ನಾನು ಯಾವಾಗಲೂ ನಂಬಿಕೊಂಡಿದ್ದೆ.
ಟ್ಯಾಕ್ಸಿ ಚಾಲಕನಾಗಿ ನಾನು ಗಳಿಸಿದ್ದರಲ್ಲಿಯೇ ನಾನು ರೂ. 30,000 ಉಳಿತಾಯ ಮಾಡಿದೆ. ಅದನ್ನು ಬಳಸಿಕೊಂಡು ನಾನು ಅಲ್ಫಾ ಲೋಡ್ ಅನ್ನು ಖರೀದಿಸಲು ಮಹೀಂದ್ರ ಫೈನಾನ್ಸ್‌ನಿಂದ ಮೂರು ಚಕ್ರದ ವಾಹನ ಸಾಲವನ್ನು ಪಡೆದೆ. ಮತ್ತು ಅವರಿಗೆ ಧನ್ಯವಾದಗಳು, ನಾನೀಗ ವಾಹನದ ಹೆಮ್ಮೆಯ ಮಾಲೀಕನಾಗಿದ್ದೇನೆ. ಅಂದಿನಿಂದ, ನನ್ನ ಆದಾಯವು ಗಣನೀಯವಾಗಿ ಹೆಚ್ಚಿದೆ ಮತ್ತು ನಾನು ಸಮಾಜದಲ್ಲಿ ನನ್ನದೇ ಆದ ಗೌರವವನ್ನು ಹೊಂದಿದ್ದೇನೆ. ಇಂದು, ನನ್ನ ಬಗ್ಗೆ ನಾನು ತುಂಬಾ ಹೆಚ್ಚು ವಿಶ್ವಾಸ ಹೊಂದಿದ್ದೇನೆ ಮತ್ತು ಶೀಘ್ರದಲ್ಲಿಯೇ ಎರಡನೆಯ ವಾಹನವನ್ನು ಖರೀದಿಸಲು ಮೊದಲನೆಯದರ ಸಾಲವು ಮುಗಿಯುವುದನ್ನು ನಾನೀಗ ಕಾಯುತ್ತಿದ್ದೇನೆ.
ಸ್ವದೇಶದಲ್ಲಿ 'ಬೆಳೆಯಲು' ನನಗೆ ಸಹಾಯ ಮಾಡಿದ್ದಕ್ಕಾಗಿ ಮಹೀಂದ್ರ ಫೈನಾನ್ಸ್‌ಗೆ ಧನ್ಯವಾದಗಳು."
"ನಾನು ನನ್ನ 10ನೇ ವಯಸ್ಸಿನಲ್ಲಿಯೇ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡಲಾರಂಭಿಸಿದೆ ಮತ್ತು ಅಲ್ಲಿ ಕೆಲಸ ಮಾಡುತ್ತಾ ಮೆಕ್ಯಾನಿಕ್ ಆಗಿ ಬೆಳೆದೆ. ಒಂದು ದಿನ, ಬಜಾಜ್ 3 ಚಕ್ರದ ವಾಹನವು ದುರಸ್ಥಿಗೆ ಬಂದಿತು. ನಾನದನ್ನು ಖರೀದಿಸಲು ನಿರ್ಧರಿಸಿದೆ. ಅದಕ್ಕಾಗಿ ನನ್ನ ಸಂಬಂಧಿಕರಿಂದ ಮತ್ತು ನಾನೀಗಾಗಲೇ ಹೊಂದಿದ್ದ ಉಳಿತಾಯದಿಂದ ನಾನು ಹಣ ಸಂಗ್ರಹಿಸಿದೆ. ನಾನು ಸುಮಾರು ಆರರಿಂದ ಏಳು ವರ್ಷಗಳವರೆಗೆ ವಾಹನವನ್ನು ಬಳಸಿದೆನಾದರೂ ಇದು ಹಳೆಯದೇ ಆಗಿದ್ದುದರಿಂದ ಇದರ ನಿರ್ವಹಣೆಗಾಗಿ ನಾನು ಬಹಳಷ್ಟು ಹಣ ಖರ್ಚು ಮಾಡುವಂತಾಯಿತು. ನಂತರ ನಾನದನ್ನು ಮತ್ತೆ ಮಾರಾಟ ಮಾಡಿದೆ ಮತ್ತು ಕೆಲವು ಸಮಯ ಚಾಲಕನಾಗಿ ಕೆಲಸ ಮಾಡಿದೆ.
ಮಹೀಂದ್ರ ಫೈನಾನ್ಸ್ 100% ಸಾಲದ ಆಯ್ಕೆಯೊಂದಿಗೆ ಬಂದಾಗ ನಾನದರಲ್ಲಿ ಅವಕಾಶವನ್ನು ಕಂಡೆ. ಮೂರು ಚಕ್ರದ ವಾಹನ ಸಾಲದಿಂದ ಕೇವಲ 13,000 ನಗದು ಪಾವತಿಯೊಂದಿಗೆ ಹೊಸ ಅಲ್ಫಾವನ್ನು ಖರೀದಿಸಿದೆ. ಇಂದು, ನನ್ನ ಪರಿಶ್ರಮ, ಮಹೀಂದ್ರ ಫೈನಾನ್ಸ್‌ನ ಬೆಂಬಲ ಫಲ ನೀಡಿದೆ ಮತ್ತು ನನ್ನ ಇಎಮ್‌ಐ ರೂ. 6,500 ಅನ್ನು ಪಾವತಿಸುವಷ್ಟು ನಾನು ಗಳಿಸುತ್ತಿದ್ದೇನೆ.
ಮತ್ತು ನನ್ನ ವ್ಯವಹಾರವನ್ನು ವಿಸ್ತರಿಸಲು ನಾನು ಬಯಸಿದರೂ ಸಾಕಷ್ಟು ಚಾಲಕರು ಸುಲಭವಾಗಿ ಸಿಗದಿರುವುದು ಸಮಸ್ಯೆಯಾಗಿದೆ. ಮಹೀಂದ್ರ ಫೈನಾನ್ಸ್ ಅವರೆಲ್ಲರನ್ನೂ ಯಶಸ್ವಿ ಉದ್ಯಮಿಗಳನ್ನಾಗಿಸಿದೆ!"
"ಬೇರೆ ಸಂಬಂಧಿಕರೆಲ್ಲಾ ಕಾರನ್ನು ಹೊಂದಿದ್ದಾರೆ ಮತ್ತು ನಮಗಿಲ್ಲ ಎಂಬುದಾಗಿ ನನ್ನ ಪತ್ನಿ ಮತ್ತು ಮಕ್ಕಳು ಯಾವಾಗಲೂ ದೂರುತ್ತಿದ್ದರು. ಆದಾಗ್ಯೂ, ಸಾಧಾರಣ ಆದಾಯದ ಸಾಮಾನ್ಯ ಪೆಟ್ರೋಲ್ ಬಂಕ್ ಅಟೆಂಡಂಟ್ ಆಗಿರುವ ನಾನು ಕಾರನ್ನು ಖರೀದಿಸುವುದು ಅಸಾಧ್ಯ ಎಂದು ತಿಳಿದುಕೊಂಡಿದ್ದೆ. ಆದರೆ ಅವರ ಕಣ್ಣಲ್ಲಿನ ನಿರಾಶೆಯನ್ನು ನನ್ನಿಂದ ನೋಡಲು ಸಾಧ್ಯವಾಗುತ್ತಿರಲಿಲ್ಲ.
ಹೀಗಾಗಿ ನಾನು ಕಾರ್‌ಗಳ ಬಗ್ಗೆ ಮತ್ತು ಅವರು ನನಗೆ ಕಾರ್ ಸಾಲದ ಯೋಜನೆಗಳ ಬಗ್ಗೆ ಮಾರ್ಗದರ್ಶನ ನೀಡಬಹುದೇ ಎಂಬ ಬಗ್ಗೆ ಮಾರುತಿಯಲ್ಲಿ ವಿಚಾರಿಸಿದೆ. ಆದರೆ ನನ್ನ ಆದಾಯ ಮತ್ತು ಲಭ್ಯವಿರುವ ದಸ್ತಾವೇಜುಗಳು ಸಾಲವನ್ನು ಪಡೆಯಲು ಎಂದಿಗೂ ಸಾಕಾಗುವುದಿಲ್ಲ ಎಂಬ ಭಯ ನನಗಿತ್ತು. ಆದಾಗ್ಯೂ, ವ್ಯಾಪಾರಿಯು ಮಹೀಂದ್ರ ಫೈನಾನ್ಸ್‌ಗೆ ನನ್ನನ್ನು ಪರಿಚಯಿಸಿದರು. ಎಮ್‌ಎಮ್‌ಎಫ್‌ಎಸ್‌ಎಲ್ ನನಗೆ ಸಾಲವನ್ನು ಮಾತ್ರ ನೀಡಲಿಲ್ಲ, ನಗದಿನ ರೂಪದಲ್ಲಿ ಪಾವತಿಸುವ ಆಯ್ಕೆಯೊಂದಿಗೆ ಐದು ವರ್ಷಗಳ ದೀರ್ಘಕಾಲದ ಅವಧಿಯನ್ನೂ ಕೂಡ ಒದಗಿಸಿತು.
ನಾನು ಸಾಲ ತೆಗೆದುಕೊಳ್ಳಲು ನಿರ್ಧರಿಸಿದೆ ಮತ್ತು ಮಾರುತಿ 800 ಕಾರನ್ನು ಖರೀದಿಸಿದೆ. ಅಂದಿನಿಂದ, ನಾನು ರಜಾದಿನಗಳಲ್ಲಿ ನನ್ನ ಕುಟುಂಬದೊಂದಿಗೆ ಹೊರಗೆ ಹೋಗುತ್ತಿದ್ದೇನೆ ಮತ್ತು ಮದುವೆಗಳು, ದೀಪಾವಳಿ ಆಚರಣೆಯಂತಹ ಸಾಮಾಜಿಕ ಕಾರ್ಯಕ್ರಮಗಳಿಗೆ ನಮ್ಮ ಕಾರನ್ನು ತೆಗೆದುಕೊಂಡು ಹೋಗುತ್ತಿದ್ದೇವೆ.
ಇಂದು ನನ್ನ ಕುಟುಂಬ ಸಂತೋಷವಾಗಿರುವುದರಿಂದ ನಾನು ತುಂಬಾ ಸಂತೋಷವಾಗಿದ್ದೇನೆ. ಅಂತೂ ಇತರ ಎಲ್ಲರಂತೆ ನಾವೂ ಕೂಡ ಈಗ ಕಾರ್ ಅನ್ನು ಹೊಂದಿರುವ ಸಂತೋಷವನ್ನು ಆನಂದಿಸಬಹುದು - ನನ್ನ ಕುಟುಂಬದ ಬಯಕೆಯನ್ನು ಪೂರೈಸಲು ನನಗೆ ಸಹಾಯ ಮಾಡಿರುವ ಮಹೀಂದ್ರ ಫೈನಾನ್ಸ್‌ಗೆ ಧನ್ಯವಾದಗಳು!"
"ನಾನು ಇಟ್ಟಿಗೆ ತಯಾರಿಕಾ ಘಟಕದಲ್ಲಿ ಸಾಮಾನ್ಯ ಕೆಲಸಗಾರನಾಗಿದ್ದೆ. ಆದರೆ ನಾನು ಸರಕುಗಳನ್ನು ಸಾಗಿಸುವ ನನ್ನದೇ ಆದ ವ್ಯವಹಾರವನ್ನು ಆರಂಭಿಸಬೇಕು ಎಂದು ಯಾವಾಗಲೂ ಬಯಸುತ್ತಿದ್ದೆ. ಆದಾಗ್ಯೂ, ಟ್ರಾಕ್ಟರ್ ಖರೀದಿಸಲು ಸಾಲ ಪಡೆಯುವುದೇ ಒಂದು ದೊಡ್ಡ ಸಮಸ್ಯೆಯಾಗಿತ್ತು.
ನಾನು ಹಲವಾರು ಬ್ಯಾಂಕ್‌ಗಳನ್ನು ಹಾಗೂ ಇತರ ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸಿದೆ ಮತ್ತು ಉತ್ಪನ್ನದ ರೂಪದಲ್ಲಿ ಮರುಸಾಲವನ್ನು ನೀಡುವುದಿಲ್ಲ ಎಂಬುದಾಗಿ ತಿಳಿಯಿತು. ಅಂತಹ ಸಂದರ್ಭದಲ್ಲಿ ಮಹೀಂದ್ರ ಫೈನಾನ್ಸ್ ಬಂದಿತು ಮತ್ತು ಯಾವುದೇ ಸಮಸ್ಯೆಯಿಲ್ಲದೇ ನನಗೆ ಟ್ರಾಕ್ಟರ್ ಸಾಲವನ್ನು ಒದಗಿಸಿತು. ಇಂದು, ನಾನೇ ನನ್ನ ಬಾಸ್ ಮತ್ತು ಗೌರವದ ಆದಾಯವನ್ನು ಗಳಿಸುತ್ತಿದ್ದೇನೆ. ಪ್ರಾಮಾಣಿಕವಾಗಿ, ಮಹೀಂದ್ರ ಫೈನಾನ್ಸ್ ನನ್ನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿತು! ಚಿಕ್ಕದಾಗಿ ಹೇಳಬೇಕೆಂದರೆ ಮಹೀಂದ್ರ ಫೈನಾನ್ಸ್ ನನ್ನನ್ನು ಕೆಲಸಗಾರನಿಂದ ಮಾಲೀಕನನ್ನಾಗಿ ಮಾಡಿತು."
"ನಾನು ನೆನಪಿಸಿಕೊಳ್ಳುವಂತೆ, ನನ್ನ ಸ್ವಂತ ಮನೆಯನ್ನು ಖರೀದಿಸಲು ನಾನು ಯಾವಾಗಲೂ ಬಯಸುತ್ತಿದ್ದೆ. ಆದರೆ ನಾನಿದ್ದ ಪರಿಸ್ಥಿತಿಯಲ್ಲಿ, ಯಾರೊಬ್ಬರೂ ನನಗೆ ಸಾಲವನ್ನು ನೀಡಲು ಭರವಸೆ ಹೊಂದಿರಲಿಲ್ಲ. ಆ ಸಮಯದಲ್ಲಿ, ನಾನು ಸಣ್ಣ ಬಟ್ಟೆ ತಯಾರಿಕಾ ಕಾರ್ಯಾಗಾರವನ್ನು ಹೊಂದಿದ್ದೆ ಮತ್ತು ನನ್ನ ವಾರ್ಷಿಕ ಆದಾಯ ಕೇವಲ 1.5 ಲಕ್ಷ ರೂ. ಆಗಿತ್ತು. ಅಂತಹ ಸಂದರ್ಭದಲ್ಲಿ ಒಬ್ಬ ಸ್ನೇಹಿತ ನನ್ನನ್ನು ಮಹೀಂದ್ರ ಫೈನಾನ್ಸ್‌ಗೆ ಪರಿಚಯಿಸಿದ. ಪರಿಶೀಲನೆಯ ನಂತರ, ನನಗೆ ತಕ್ಷಣ 4 ಲಕ್ಷ ರೂಪಾಯಿ ಸಾಲ ನೀಡಿದರು. ಮತ್ತು ಇಡೀ ಪ್ರಕ್ರಿಯೆಯು ಸಂಪೂರ್ಣ ತ್ವರಿತ ಮತ್ತು ಸಮಸ್ಯೆಮುಕ್ತ ರೀತಿಯಲ್ಲಿ ನಡೆಯಿತು.
ನಾನು ಮಹೀಂದ್ರ ಫೈನಾನ್ಸ್‌ಗೆ ನಿಜವಾಗಿಯೂ ತುಂಬಾ ಕೃತಜ್ಞನಾಗಿದ್ದೇನೆ. ಇಂದು ನಾನು ಒಂದು ಮನೆಯ ಹೆಮ್ಮೆಯ ಮಾಲೀಕನಾಗಿರುವುದು ಅವರಿಂದಲೇ ಎಂದು ನಾನು ಭಾವಿಸುತ್ತೇನೆ. ಈ ಮನೆ ನನಗೆ ನಿಜವಾಗಿಯೂ ಅದೃಷ್ಟಶಾಲಿಯಾಗಿದೆ. ನನ್ನ ವ್ಯವಹಾರವು ತುಂಬಾ ಚೆನ್ನಾಗಿ ನಡೆಯುತ್ತಿದೆ. ನನ್ನ ಆದಾಯವು ಹೆಚ್ಚಿರುವುದರಿಂದ ಯಾವುದೇ ಒತ್ತಡವಿಲ್ಲದೇ ನಾನು ಸಾಲವನ್ನು ಮರುಪಾವತಿಸುತ್ತಿದ್ದೇನೆ. ಮತ್ತು ಮಹೀಂದ್ರ ಫೈನಾನ್ಸ್‌ನ ಸಕಾಲಿಕ ಸಹಾಯವಿಲ್ಲದೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ."
"ನಾನು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೆ ಆದರೆ ನಾನು ದೊಡ್ಡ ತುಂಡು ಭೂಮಿಯನ್ನು ಹೊಂದಿದ್ದು ಅದರಲ್ಲಿ ಸುಂದರವಾದ ಪುಟ್ಟ ಮನೆಯನ್ನು ನಿರ್ಮಿಸುವ ಕನಸನ್ನು ಹೊಂದಿದ್ದೆ. ಆದರೆ ನನ್ನ ಬಳಿ ಹಣವಿರಲಿಲ್ಲ. ಹೀಗಾಗಿ ನಾನು ಎಮ್‌ಆರ್‌ಎಚ್‌ಎಫ್‌ಎಲ್ ಅನ್ನು ಸಂಪರ್ಕಿಸಿದೆ ಮತ್ತು ನನ್ನ ಮನೆಯನ್ನು ನಿರ್ಮಿಸಲು ನನಗೆ ಸಹಾಯ ಮಾಡಲು ಅವರು ತಕ್ಷಣ ಸಾಲವನ್ನು ಮಂಜೂರು ಮಾಡಿದರು. ಹೊಸ ಮನೆಯು ನನ್ನ ಕುಟುಂಬಕ್ಕೆ ಅಪಾರ ಸಂತೋಷವನ್ನು ತಂದಿದೆ. ನನ್ನ ಪತ್ನಿ ಮತ್ತು ಮಕ್ಕಳು ತುಂಬಾ ಸಂತೋಷವಾಗಿದ್ದಾರೆ ಮತ್ತು ನನ್ನ ಬಗ್ಗೆ ಹೆಮ್ಮೆ ಪಡುತ್ತಾರೆ."
"ನನ್ನ ಪತಿ ಮಹೀಂದ್ರ ಫೈನಾನ್ಸ್ ಮೂಲಕ ಮಾರುತಿ ಆಲ್ಟೊ ಖರೀದಿಸಿದರು. ಆ ಸಮಯದಲ್ಲಿ, ನನ್ನ ಗಂಡನಿಗೆ ಏನಾದರೂ ಸಂಭವಿಸಿದರೆ, ಸಾಲದ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತಹ ಭರವಸೆ ನೀಡುವಂತಹ ಮಹೀಂದ್ರ ಸಾಲ ಸುರಕ್ಷಾ ಉತ್ಪನ್ನದ ಬಗ್ಗೆ ಸಿಬ್ಬಂದಿ ತಿಳಿಸಿದರು.
ಕುಟುಂಬದಲ್ಲಿನ ಏಕೈಕ ಗಳಿಸುವ ಸದಸ್ಯರಾಗಿದ್ದುದರಿಂದ, ನಾವು ಈ ಅವಕಾಶವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ನಿರ್ಧರಿಸಿದರು. ಒಂದು ವರ್ಷದ ನಂತರ, ನಮ್ಮ ಜೀವನದಲ್ಲಿ ಆಘಾತಕರ ರೀತಿಯಲ್ಲಿ ನನ್ನ ಪತಿ ದೂರವಾದರು. ನಾವೆಲ್ಲರೂ ತುಂಬಾ ಆಘಾತದಲ್ಲಿದ್ದೆವು. ಮೂರು ಮಕ್ಕಳನ್ನು ನೋಡಿಕೊಳ್ಳುವುದರೊಂದಿಗೆ, ಸಾಲವನ್ನು ಮರುಪಾವತಿಸುವ ಯಾವುದೇ ಸ್ಥಿತಿಯಲ್ಲಿ ನಾನಿರಲಿಲ್ಲ. ಏನು ಮಾಡಬೇಕೆಂದು ನನಗೆ ತಿಳಿಯಲಿಲ್ಲ. ಅದೃಷ್ಟವಶಾತ್, ಆ ಸಮಯದಲ್ಲಿ ಮಹೀಂದ್ರ ಫೈನಾನ್ಸ್ ಸಹಾಯಕ್ಕೆ ಬಂದಿತು ಮತ್ತು ಮಹೀಂದ್ರ ಸಾಲ ಸುರಕ್ಷಾ ಪರಿಹಾರವನ್ನು ಬಳಸಲು ನಮಗೆ ಸಹಾಯ ಮಾಡಿತು. ಅವರು ಎಲ್ಲವನ್ನೂ ನೋಡಿಕೊಂಡರು ಮತ್ತು ಸಂಪೂರ್ಣ ಸಾಲವನ್ನು ವಜಾಗೊಳಿಸಲಾಯಿತು. ನಾನು ಅವರು ನೀಡಿದ ಬೆಂಬಲಕ್ಕಾಗಿ ಮಹೀಂದ್ರ ಫೈನಾನ್ಸ್‌ಗೆ ನಿಜವಾಗಿಯೂ ಕೃತಜ್ಞನಾಗಿದ್ದೇನೆ."
"I took a personal loan from Mahindra Finance as I wanted to renovate my house. The rate of interest being offered to me was very low. So I took it, and I found the loan process to be smooth and quick. The entire house renovation process was hassle-free, and I owe a lot to Mahindra Finance."
"ನಾನು ಕಳೆದ ಆರು ವರ್ಷಗಳಿಂದ ಮಹೀಂದ್ರ ಫೈನಾನ್ಸ್‌ನ ಗ್ರಾಹಕನಾಗಿದ್ದೇನೆ ಮತ್ತು ಅದರ ಸೇವೆಯಿಂದ ನಾನು ತುಂಬಾ ಸಂತೋಷವಾಗಿದ್ದೇನೆ. ನಾನು ಭತ್ತವನ್ನು ಬೆಳೆಯುವ ನನ್ನ ಎರಡು ಎಕರೆ ಭೂಮಿಗಾಗಿ ಮಹೀಂದ್ರ ಟ್ರಾಕ್ಟರ್ ಅನ್ನು ಖರೀದಿಸುವ ಸಲುವಾಗಿ 2004ರಲ್ಲಿ ನಾನು ಮೊದಲಿಗೆ ಅವರಲ್ಲಿಗೆ ಹೋದೆ. ಸ್ಥಳೀಯ ವಿತರಕರು ನನ್ನ ಸಾಲದ ಪ್ರಸ್ತಾಪವನ್ನು ಮಹೀಂದ್ರ ಫೈನಾನ್ಸ್‌ಗೆ ವರ್ಗಾಯಿಸಿದರು.
ತಕ್ಷಣ, ಅವರ ಪ್ರತಿನಿಧಿ ಪರಿಶೀಲನೆಗಾಗಿ ನನ್ನನ್ನು ಭೇಟಿಯಾದರು ಮತ್ತು ಅಚ್ಚರಿಯೆಂದರೆ ಸಾಲ ಸಮಯಕ್ಕೆ ಸರಿಯಾಗಿ ಮಂಜೂರಾಯಿತು. ಅದರ ನಂತರ ನಾನು ನಾಲ್ಕು ಹೊಸ ಟ್ರಾಕ್ಟರ್ ಸಾಲಗಳನ್ನು ಪಡೆಯಬೇಕಾಗಿ ಬಂದಾಗ, ನಾನು ಮಹೀಂದ್ರ ಫೈನಾನ್ಸ್ ಅನ್ನು ಬಿಟ್ಟು ಬೇರೆ ಯಾರ ಬಗ್ಗೆಯೂ ಯೋಚಿಸಲೇ ಇಲ್ಲ. ಅವರೊಂದಿಗಿನ ನನ್ನ ಅನುಭವವು ತುಂಬಾ ಸಕಾರಾತ್ಮಕವಾಗಿರುವುದರಿಂದ ನಾನು ನನ್ನ ಪ್ರದೇಶದ ಹಲವಾರು ಪರಿಚಯದವರಿಗೆ ಮಹೀಂದ್ರ ಫೈನಾನ್ಸ್ ಅನ್ನು ಶಿಫಾರಸು ಮಾಡಿದ್ದೇನೆ. ನಾನು ತುಂಬಾ ಸಂತೋಷವಾಗಿದ್ದೇನೆ ಮತ್ತು ಮಹೀಂದ್ರ ಫೈನಾನ್ಸ್‌ನ ಗ್ರಾಹಕನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ."
"ಮಹೀಂದ್ರ ಫೈನಾನ್ಸ್ ಕೇವಲ ಹಣಕಾಸು ನೀಡುವುದಷ್ಟೇ ಅಲ್ಲ, ನನ್ನ ಮಟ್ಟಿಗೆ ಇದು ಬೆಂಬಲ ನೀಡುವ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ನಾನು ಮಹೀಂದ್ರ ಫೈನಾನ್ಸ್ ಸಹಾಯದಿಂದ ಮೂರು ವಾಹನಗಳಿಗೆ ಮರುಸಾಲ ಪಡೆದಿದ್ದೇನೆ ಮತ್ತು ನನ್ನ ವ್ಯಾಪಾರವನ್ನು ಕೂಡ ವಿಸ್ತರಿಸಿದ್ದೇನೆ. ಇಂದು, ನಾನು ನನ್ನ ಸ್ನೇಹಿತರಲ್ಲಿ ಒಬ್ಬ ಅಭಿಪ್ರಾಯ ನೀಡುವ ನಾಯಕನಾಗಿ ಪರಿಗಣಿಸಲ್ಪಟ್ಟಿದ್ದೇನೆ ಮತ್ತು ಇತರ ಸ್ಥಳೀಯ ಸಾರಿಗೆದಾರರಿಗೆ ಕೂಡ ಮಹೀಂದ್ರ ಫೈನಾನ್ಸ್ ಅನ್ನು ಶಿಫಾರಸು ಮಾಡಿದ್ದೇನೆ."
"ನಾನು ಜಾನುವಾರುಗಳ ಪೂರೈಕೆಯ ಸಣ್ಣ ಉದ್ಯಮವನ್ನು ಹೊಂದಿದ್ದೆ. ನಾನು ಮಹೀಂದ್ರ ಫೈನಾನ್ಸ್ ಅನ್ನು ಸಂಪರ್ಕಿಸುವುದಕ್ಕಿಂತ ಮೊದಲು ನಾನು ಜಾನುವಾರುಗಳನ್ನು ರೈತರಿಂದ ಪಡೆಯುತ್ತಿದ್ದೆ ಮತ್ತು ಮೂರು ಚಕ್ರದ ವಾಹನದ ಮೂಲಕ ಅವುಗಳನ್ನು ಜಾನುವಾರು ಶಿಬಿರಗಳಿಗೆ ಕೊಂಡೊಯ್ಯುತ್ತಿದ್ದೆ ಮತ್ತು ಅಲ್ಲಿ ಎಲ್ಲವನ್ನೂ ಮಾರಾಟ ಮಾಡುತ್ತಿದ್ದೆ. ಇದರಿಂದ ನನಗೆ ಒಂದು ಬಾರಿಗೆ 7,000 ರೂಪಾಯಿಗಳಿಂದ 8,000 ರೂಪಾಯಿ ಆದಾಯ ಲಭಿಸುತ್ತಿತ್ತು.
ನಂತರ ಮಹೀಂದ್ರ ಫೈನಾನ್ಸ್‌ನ ಸಾಲ ಪಡೆದು ನಾನು ಬೊಲೆರೋ ಪಿಕಪ್ ಖರೀದಿಸಿದೆ. ನಾನು ತ್ವರಿತವಾಗಿ ಮತ್ತು ಸಮಸ್ಯೆಯಿಲ್ಲದೇ ಸಾಲ ಪಡೆದೆ ಎಂಬುದನ್ನು ನಾನು ಹೇಳಲೇಬೇಕು. ನಂತರ ನಾನು ವೈಯಕ್ತಿಕ ಸಾಲದೊಂದಿಗೆ ಅದೇ ವಾಹನದ ಮೇಲೆ ಹೆಚ್ಚುವರಿ ಸಾಲವನ್ನು ಪಡೆದೆ. ನನ್ನ ಜೀವನ ಸಂಪೂರ್ಣ ಬದಲಾಗಿದೆ ಮತ್ತು ನನ್ನ ವ್ಯವಹಾರವು ಗಮನಾರ್ಹವಾಗಿ ಬೆಳೆದಿದೆ. ನಾನೀಗ ಪ್ರತಿ ತಿಂಗಳು 20,000 ರೂಪಾಯಿಗಳಿಂದ 22,000 ರೂಪಾಯಿಗಳವರೆಗೆ ಗಳಿಸುತ್ತೇನೆ. ಉತ್ತಮವಾದ ಶಾಲೆಗೆ ನನ್ನ ಮಕ್ಕಳು ಈಗ ಹೋಗುತ್ತಾರೆ. ನಾನು ಒಂದು ಫ್ಲಾಟ್ ಅನ್ನು ಕೂಡ ಖರೀದಿಸಿದ್ದೇನೆ ಮತ್ತು ಇವೆಲ್ಲಾ ಮಹೀಂದ್ರ ಫೈನಾನ್ಸ್‌ನ ಸಹಾಯದಿಂದ ಮಾತ್ರ ಸಾಧ್ಯವಾಗಿವೆ. ನಾನು ನಿಜವಾಗಿಯೂ ಅವರಿಗೆ ಋಣಿಯಾಗಿದ್ದೇನೆ."
"ಮಹೀಂದ್ರ ಫೈನಾನ್ಸ್ ನೀಡುವ ಬಡ್ಡಿ ದರದಿಂದ ಆಕರ್ಷಿತನಾಗಿ ನಾನು ಅದನ್ನು ಆಯ್ಕೆ ಮಾಡಿಕೊಂಡೆ. ನಾನು ಮಹೀಂದ್ರ ಫೈನಾನ್ಸ್ ಅನ್ನು ಇತರ ಹಣಕಾಸು ಸಂಸ್ಥೆಗಳೊಂದಿಗೆ ಹೋಲಿಸಿ ನೋಡಿದೆ ಮತ್ತು ಸಿಬ್ಬಂದಿಯು ಸಂಪೂರ್ಣವಾಗಿ ವೃತ್ತಿಪರವಾಗಿ ಮತ್ತು ಸಹಕಾರಯುತವಾಗಿರುವುದನ್ನು ಕಂಡುಕೊಂಡೆ. ಅವರು ಕಡಿಮೆ ಬಡ್ಡಿ ದರದೊಂದಿಗೆ ಗ್ರಾಹಕರ ಅಗತ್ಯತೆಗಳಿಗೆ ತಕ್ಕಂತೆ ಸಾಲಗಳನ್ನು ಒದಗಿಸುತ್ತಾರೆ. ಅದರ ಪ್ರತಿನಿಧಿಗಳು ಪ್ರತಿ ತಿಂಗಳು ನನ್ನೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಅವರ ಯೋಜನೆಯ ನವೀಕರಣಗಳು ಮತ್ತು ಬಡ್ಡಿ ಪಾವತಿಸುವ ದಿನಾಂಕಗಳ ಕುರಿತು ನನಗೆ ನೆನಪಿಸುತ್ತಿದ್ದರು."
“ನಾನು ಪದವಿಪೂರ್ವ ಶಿಕ್ಷಣ ಓದಿದವನು, ಭಿವಂಡಿಯಲ್ಲಿರುವ ನನ್ನ ಸ್ವಂತ ಫ್ಲಾಟ್ ನಲ್ಲಿ ವಾಸಿಸುತ್ತಿದ್ದೇನೆ ಮತ್ತು ಕರಗೇಟೆಡ್ ಬಾಕ್ಸ್ ಮೇಕರ್ ಯಂತ್ರಗಳನ್ನು ತಯಾರಿಸುವುದು ಮತ್ತು ಸರ್ವಿಸ್ ಮಾಡುವುದು ನಮ್ಮ ವ್ಯವಹಾರ - ಇದರ ಹೆಸರು ಮೆಸರ್ಸ್ ಸರ್ಜೀತ್ ಇಂಡಸ್ಟ್ರೀಸ್. ಇದು 2011 ರಲ್ಲಿ ನೋಂದಾಯಿಸಲಾದ ಒಡೆತನದ ಉದ್ಯಮವಾಗಿದೆ. ಈ ವ್ಯವಹಾರದ ಬಗ್ಗೆ ನನ್ನ ತಂದೆ ನನಗೆ ಅತ್ಯುತ್ತಮ ಜ್ಞಾನವನ್ನು ನೀಡಿದ್ದಾರೆ. 30 ವರ್ಷಗಳಿಗೂ ಹೆಚ್ಚು ಕಾಲ ದೆಹಲಿಯಲ್ಲಿ ಅವರು ಅದೇ ವ್ಯವಹಾರದಲ್ಲಿದ್ದಾರೆ. ನಾನು ಬಿವಂಡಿ ಕೈಗಾರಿಕಾ ಪ್ರದೇಶದ ಚೊಪಂಕಿಯಲ್ಲಿ ನನ್ನ ಸ್ವಂತ ಉದ್ಯಮದ ಏರಿಯಾ ಹೊಂದಿದ್ದೇನೆ.
ಮುಂಚೆ ನನ್ನ ಕೆಲಸವನ್ನು ಹೊರಗುತ್ತಿಗೆ ಮಾಡುತ್ತಿದ್ದೆ. ಬೇಡಿಕೆ ಅಧಿಕವಾಗಿತ್ತು, ಆದರೆ ಸ್ಟಾಕ್ ಕಡಿಮೆಯಿತ್ತು. ಗ್ರಾಹಕರ ಅವಶ್ಯಕತೆಗಳನ್ನು ಪೂರೈಸಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಅಗತ್ಯತೆಗಳ ಪ್ರಕಾರ ನಾನು ಯಂತ್ರವನ್ನು ಸಮಯಕ್ಕೆ ಸರಿಯಾಗಿ ತಲುಪಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ನನ್ನ ಕಚೇರಿ, ಜೊತೆಗೆ ವಸತಿ ಪ್ರದೇಶಗಳನ್ನು ಬಾಡಿಗೆ ಪಡೆದಿದ್ದೆ. ವಿದ್ಯುತ್ ಕಡಿತ ಸಮಸ್ಯೆಗಳಿಗೆ ಬ್ಯಾಕ್ಅಪ್ ಆಗಿ ಎಲ್ಲ ಕೆಲಸಗಳನ್ನು ಮಾಡುವುದಕ್ಕಾಗಿ ಜನರೇಟರುಗಳು ಕೂಡಾ ಅಗತ್ಯವಾಗಿದ್ದವು.
ಸಾಲವನ್ನು ಪಡೆದ ನಂತರ, ಯಂತ್ರಗಳ ವಿತರಣೆಯಲ್ಲಿ ಸಹಾಯ ಮಾಡುವ ಇತ್ತೀಚಿನ ಯಂತ್ರಗಳು ಮತ್ತು ಜೆನ್ಸೆಟ್ ಗಳನ್ನು ನಾನು ಖರೀದಿಸಬಹುದಾಗಿತ್ತು. 30 ಲಕ್ಷದಿಂದ ಟಿಒ 3 ಕೋಟಿ ರೂ.ಗೆ ವಿಸ್ತರಿಸಿದೆ. ನನ್ನ ವ್ಯವಹಾರ ವಿಸ್ತಾರಗೊಂಡಿತು. ಯಂತ್ರಗಳನ್ನು ಸೇರಿಸುವ ಮೂಲಕ ನನ್ನ ಮಾರಾಟ ಮತ್ತು ಮಾರ್ಜಿನ್ ಗಳನ್ನು ಸುಧಾರಿಸಲಾಯಿತು ಮತ್ತು ಪ್ರತಿಯಾಗಿ ನೌಕರರಿಗೆ ಕಡಿಮೆ ಸಂಬಳ ನೀಡಿದೆ.
ರಾಜಸ್ಥಾನ ಮತ್ತು ಹರಿಯಾಣದ ಇತರ ಪ್ರದೇಶಗಳಿಗೆ ನನ್ನ ವ್ಯವಹಾರವನ್ನು ವಿಸ್ತರಿಸಲು ನಾನು ಇನ್ನಷ್ಟು ಯೋಜನೆ ಹಾಕಿದ್ದೇನೆ. ಯಂತ್ರೋಪಕರಣಗಳ ಸಾಮರ್ಥ್ಯವನ್ನು ಹೆಚ್ಚಿಸಲು ನಾನು ಯೋಜಿಸುತ್ತಿದ್ದೇನೆ. ನನ್ನ ಮೊದಲ ಸಾಲವನ್ನು ತೆಗೆದುಕೊಂಡ ಬಳಿಕ ಬಹಳಷ್ಟು ಬದಲಾವಣೆಯಾಗಿದೆ. ಏನೇ ಇದ್ದರೂ ನಾನು ಯಾವಾಗಲೂ ಎರಡು ಪದಗಳನ್ನು ಅವಲಂಬಿಸುತ್ತೇನೆ - ಮಹೀಂದ್ರ ಫೈನಾನ್ಸ್!
“ನಾನು ಎಲ್ಲಾ ವಿಧದ ಸಿಹಿತಿಂಡಿ ಮತ್ತು ಡೈರಿ ಉತ್ಪನ್ನಗಳ ಸಗಟು ಮತ್ತು ಚಿಲ್ಲರೆ ವ್ಯಾಪಾರದ ತಯಾರಿಕೆ ಮತ್ತು ವಹಿವಾಟಿನ ವ್ಯವಹಾರ ಮಾಡುತ್ತೇನೆ - ಚೀಸ್, ಬೆಣ್ಣೆ, ಕ್ರೀಮ್, ಮೊಸರು, ಮಾವಾ ಮತ್ತು ದೇಸಿ ತುಪ್ಪ ಹೀಗೆ. ನನ್ನ ತಂದೆ, ತಾಯಿ, ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಹನ್ಸಿಯಲ್ಲಿರುವ ನನ್ನ ಹಳ್ಳಿಯ ಮನೆಯಲ್ಲಿ ನಾನು ವಾಸಿಸುತ್ತಿದ್ದೇನೆ. ನನ್ನ ಅಂಗಡಿ, ಮೆಸರ್ಸ್ ಬಜಾಜ್ ಕೇಟರರ್ಸ್ ಹನ್ಸಿ ಜಿಲ್ಲೆಯ ಮಾಲಿಕ್ ಆಸ್ಪತ್ರೆಯ ಸಮೀಪದಲ್ಲಿದೆ. ನಾನು ಈ ಅಂಗಡಿಯನ್ನು ಕಳೆದ 12 ವರ್ಷಗಳಿಂದ ಬಾಡಿಗೆ ಸ್ಥಳದಲ್ಲಿ ನಡೆಸುತ್ತಿದ್ದೇನೆ. ನಾನು ನನ್ನ ಸ್ಟಾಕ್ ಅನ್ನು ಸರಿಯಾಗಿ ಇರಿಸಿಕೊಳ್ಳಲು ಗೋದಾಮುಗಳನ್ನು ಖರೀದಿಸುತ್ತಿದ್ದೇನೆ. ನನ್ನ ತಂದೆ 40 ವರ್ಷಗಳಿಂದ ತನ್ನ ಚೊಲ್ ಬಟೂರ್ ಜಾಯಿಂಟ್ ಅನ್ನು ನಡೆಸುತ್ತಿದ್ದು ವ್ಯವಹಾರಕ್ಕಾಗಿ ನನಗೆ ಅಗತ್ಯವಿರುವ ಎಲ್ಲಾ ಜ್ಞಾನವನ್ನು ಅವರು ನನಗೆ ಕೊಟ್ಟಿದ್ದಾರೆ. ನಾನು 10 ವರ್ಷದವನಾಗಿದ್ದಂದಿನಿಂದ ನನ್ನ ತಂದೆಯಿಂದ ಉತ್ಪಾದನೆ ಮತ್ತು ವ್ಯಾಪಾರದ ಬಗ್ಗೆ ಕಲಿತಿದ್ದೇನೆ.
ಸಾಲ ತೆಗೆದುಕೊಳ್ಳುವ ಮೊದಲು, ಪನೀರ್, ಬೆಣ್ಣೆ ಇತ್ಯಾದಿಗಳನ್ನು ಹಾಗೂ ಸಿಹಿತಿನಿಸುಗಳು ಮತ್ತು ಇತರ ತಿನಿಸುಗಳನ್ನು ತಯಾರಿಸಲು ನಾವು ಹಸ್ತಚಾಲಿತ ತಂತ್ರಗಳನ್ನು ಹಲವು ವರ್ಷಗಳಿಂದಲೂ ಬಳಸುತ್ತಿದ್ದೆವು. ನನ್ನ ಕಾರ್ಮಿಕರನ್ನು ನಾನು ಅವಲಂಬಿಸಿದ್ದೆ. ಅಲ್ಲದೆ, ನಾನು ಸುಸಜ್ಜಿತಗೊಂಡಿರಲಿಲ್ಲ ಮತ್ತು ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ಹೊಸ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ. ನಾನು ಉತ್ತಮ ಜ್ಞಾನವನ್ನು ಹೊಂದಿದ್ದರೂ ನನ್ನ ಗ್ರಾಹಕರಿಗೆ ವಿವಿಧ ಸಿಹಿತಿಂಡಿಗಳನ್ನು ಒದಗಿಸುವ ಇತ್ತೀಚಿನ ತಂತ್ರಜ್ಞಾನವನ್ನು ಅರಿತಿರಲಿಲ್ಲ ಎಂಬುದು ದುಃಖಕರ ವಿಷಯವಾಗಿತ್ತು. ಸ್ಪರ್ಧೆಯಲ್ಲಿ ಗೆಲ್ಲಲು ನನಗೆ ಇದು ಸಹಾಯ ಮಾಡಬಹುದಾಗಿತ್ತು. ಈ ವ್ಯವಹಾರದಲ್ಲಿ ಅಲಂಕರಣ ಮತ್ತು ನೈರ್ಮಲ್ಯವು ಅತಿ ಮುಖ್ಯವಾಗಿದೆ ಎಂಬುದು ನನ್ನ ನಂಬಿಕೆ - ನಾನು ಅದನ್ನೇ ಹೊಂದಿರಲಿಲ್ಲ. ಪೋರ್ಟ್ ಫೋಲಿಯೋ ಮ್ಯಾನೇಜರ್ ಅವರನ್ನು ಭೇಟಿಯಾದ ನಂತರ, ನಾನು ಸಿಹಿತಿನಿಸುಗಳನ್ನು ತಯಾರಿಸಲು ಇತ್ತೀಚಿನ ತಂತ್ರಜ್ಞಾನದ ಹೊಸ ಯಂತ್ರಗಳನ್ನು ಖರೀದಿಸಲು ನನ್ನ ಆಸಕ್ತಿ ವ್ಯಕ್ತಪಡಿಸಿದೆ.
ಸಾಲವನ್ನು ತೆಗೆದುಕೊಳ್ಳುವ ನನ್ನ ಉದ್ದೇಶ ನನ್ನ ರಿಟೇಲ್ ಕೌಂಟರ್ ಅಂಗಡಿಯಲ್ಲಿ ದಿನನಿತ್ಯ ಸ್ಟಾಕ್ ಇಡುವುದು ಹಾಗೂ ಹಿಸಾರ್ ಮತ್ತು ಸಮೀಪದ ಹಳ್ಳಿಗಳಲ್ಲಿ ನಿಯಮಿತ ಮದುವೆ ವ್ಯವಹಾರಕ್ಕಾಗಿ ಬಳಸುವುದಾಗಿತ್ತು. ಅಲ್ಲದೆ, ನನಗೆ ಹಣದ ಅಗತ್ಯವಿತ್ತು
- ಒಳಾಂಗಣ ವಿನ್ಯಾಸವನ್ನು ಹೆಚ್ಚಿಸಲು - 5 ಲಕ್ಷ.
- ತುಪ್ಪ, ಮೈದಾ, ಮುಂತಾದ ಕಚ್ಚಾವಸ್ತುಗಳಿಗೆ - 7-8 ಲಕ್ಷ.
- ಸಿಹಿತಿಂಡಿಗಳು, ಪನೀರ್, ಬೆಣ್ಣೆ ತಯಾರಿಸಲು ಯಂತ್ರಗಳನ್ನು ಖರೀದಿಸಲು
ಮಹೀಂದ್ರ ಫೈನಾನ್ಸ್ ರಂಗಕ್ಕೆ ಬಂದ ನಂತರ, ನನ್ನ ಸವಾಲುಗಳನ್ನು ಪರಿಹರಿಸುವುದು ಸುಲಭವಾಯಿತು - ಇತ್ತೀಚಿನ ಯಂತ್ರಗಳನ್ನು ಖರೀದಿಸಿದೆ, ಅಲಂಕಾರ ಮತ್ತು ಅಂಗಡಿಯ ಒಳಾಂಗಣ ವಿನ್ಯಾಸ ಮಾಡಿಸಿದೆ, ನಾವು ಆಧುನಿಕ ತಂತ್ರಜ್ಞಾನವನ್ನು ಸ್ಥಾಪಿಸಿ ಕೆಲಸಗಾರರ ಮೇಲೆ ಅವಲಂಬನೆ ಕಡಿಮೆ ಮಾಡಿದೆ. ಎಲ್ಲಕ್ಕಿಂತ ಹೆಚ್ಚಾಗಿ, ನನ್ನ ಸಿಹಿತಿಂಡಿಗಳ ಮಾರಾಟ ಸುಧಾರಣೆಯಾಯಿತು, ಹೊಸ ಗ್ರಾಹಕರನ್ನು ಸೆಳೆಯಲು ನನ್ನಿಂದ ಸಾಧ್ಯವಾಯಿತು. ಇದರಿಂದ ಸ್ಪರ್ಧೆಯನ್ನು ಗೆದ್ದೆವು. ನನ್ನ ಜೀವನ ಸರಳವಾಗಿದೆ! ಮರೆಯದಿರಿ, ನನ್ನ ಗಳಿಕೆಯ ಸಾಮರ್ಥ್ಯ ಹೆಚ್ಚಿದೆ. ಯಂತ್ರಗಳನ್ನು ಸೇರಿಸಿರುವುದು ಮಾರಾಟ ಮತ್ತು ಲಾಭದ ಪ್ರಮಾಣವನ್ನು ಸುಧಾರಿಸಿದೆ. ನನ್ನ ವ್ಯವಹಾರದ ಪ್ರದೇಶವು ಹತ್ತಿರದ ಪ್ರದೇಶಗಳಿಗೆ ವಿಸ್ತರಿಸಿದೆ ಮತ್ತು ನನ್ನ ನೌಕರರಿಗೆ ನಾನು ಕಡಿಮೆ ವೆಚ್ಚ ಮಾಡಬಹುದು.
ನಾನು ಕಚ್ಚಾವಸ್ತು ಮತ್ತು ಸರಕುಗಳನ್ನು ಸರಬರಾಜು ಮಾಡುವುದನ್ನು ಕೂಡ ಪ್ರಾರಂಭಿಸಿದ್ದೇನೆ. ರಾಜಸ್ಥಾನ ಮತ್ತು ಹರಿಯಾಣದ ಇತರ ಪ್ರದೇಶಗಳಿಗೆ ನನ್ನ ವ್ಯವಹಾರವನ್ನು ವಿಸ್ತರಿಸುವುದು ನನ್ನ ಭವಿಷ್ಯದ ಆಕಾಂಕ್ಷೆ. ನಾನು ಹೊಸ ಗೋದಾಮು ಖರೀದಿಸಲು ಯೋಜಿಸಿದ್ದೇನೆ. ನಾನು ಇನ್ನೂ 3 ಯಂತ್ರಗಳನ್ನು ಸೇರಿಸಲು ಯೋಜಿಸುತ್ತಿದ್ದೇನೆ - ಉಪಕರಣಗಳು ಹೆಚ್ಚಲಿವೆ.
ನನ್ನ ಜೀವನದಲ್ಲಿ ಯಾವುದೇ ಕಂಪೆನಿಯಿಂದ ನನ್ನ ಮೊದಲ ಸಾಲವನ್ನು ತೆಗೆದುಕೊಂಡ ನಂತರ ಬಹಳಷ್ಟು ಬದಲಾವಣೆಯಾಗಿದೆ, ಹೀಗಾಗಿ ನನ್ನ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ನಾನು ಸಲಹೆ ಮಾಡುವುದಿಷ್ಟೆ "ಮಹೀಂದ್ರ ಫೈನಾನ್ಸ್" ಎಂಬ ಎರಡು ಪದಗಳು.”
“ನನ್ನ ಹೆಂಡತಿ ಮತ್ತು ನಾನು 'ಎ ಟು ಝಡ್ ವಿಮೆನ್ ಸ್ಟೋರ್' ಎಂಬ ಹೆಸರಿನ ರಿಟೇಲ್ ಕಾಸ್ಮೆಟಿಕ್ಸ್ ಮತ್ತು ಜನರಲ್ ಸ್ಟೋರ್ ನಡೆಸುತ್ತಿದ್ದೇವೆ. ಇದು ಬ್ರಾಂಡ್ ಮತ್ತು ಸ್ಥಳೀಯ ವಸ್ತುಗಳೆರಡನ್ನೂ ಹೊಂದಿದೆ. ವಯಸ್ಕರಿಗೆ ಮತ್ತು ಮಕ್ಕಳಿಗೆ ಒಳ ಉಡುಪುಗಳನ್ನು ಮಾರಾಟ ಮಾಡುತ್ತೇವೆ. ಅಂಗಡಿಗಳಲ್ಲಿ ಜನಪ್ರಿಯ ಬ್ರ್ಯಾಂಡುಗಳಾದ ಜಾಕಿ, ಕಲ್ಯಾಣಿ, ನೈಕ್, ಬಾಡಿ ಕೇರ್ ಮತ್ತು ಡೈಸಿಡಿ ಸೇರಿವೆ. ನಾನು 39 ವರ್ಷ ವಯಸ್ಸಿನ ಮೆಟ್ರಿಕ್ಯುಲೇಟ್. ನನ್ನ ಹೆಂಡತಿ ನಿಶಾ ಗಬಾ 34 ವರ್ಷ ವಯಸ್ಸಿನವರಾಗಿದ್ದು ಬಿ.ಎ. ಓದಿದ್ದಾರೆ. ನನ್ನ ಹೆಂಡತಿ ಸಾಲಕ್ಕೆ ಸಹ-ಅರ್ಜಿದಾರ ಹಾಗೂ ಕಳೆದ 4 ವರ್ಷಗಳಿಂದ ಅಂಗಡಿಯನ್ನು ನಡೆಸುತ್ತಿದ್ದಾರೆ. ನನ್ನ ಕುಟುಂಬ ಮತ್ತು ನಾನು ಖ್ಯಾತಿಯನ್ನು ಹೊಂದಿದ್ದೇವೆ, ಕಳೆದ 25 ವರ್ಷಗಳಿಂದ ಈ ನಗರದ ಸದಸ್ಯನಾಗಿದ್ದೇನೆ. ನನ್ನ ಹೆಂಡತಿ ಮತ್ತು 3 ಹೆಣ್ಣುಮಕ್ಕಳೊಂದಿಗೆ ನಾನು ನನ್ನ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದೇನೆ. ಜೊತೆಗೇ ನಾವು ಅಡುಗೆ ಉದ್ಯಮವನ್ನು ಹೊಂದಿದ್ದೇವೆ.
ಈ ರಿಟೇಲ್ ವ್ಯವಹಾರದಲ್ಲಿ ನಾನು ನನ್ನ ಸ್ವಂತ ಬಂಡವಾಳವನ್ನು ಹೂಡಿರುವೆ. ನಾನು 100ಕ್ಕಿಂತಲೂ ಹೆಚ್ಚಿನ ಉತ್ಪನ್ನಗಳನ್ನು ನಿರ್ವಹಿಸುತ್ತಿದ್ದೇನೆ. ಅವುಗಳ ಅಂದಾಜು ಮೌಲ್ಯವು 10-12 ಲಕ್ಷಗಳು. ಇದಲ್ಲದೆ, ಉತ್ತಮ ಮಾರುಕಟ್ಟೆಯ ಮೌಲ್ಯವಿರುವ ನನ್ನ 4 ಹೆಚ್ಚುವರಿ ಪ್ಲಾಟ್ ಗಳು ನಗರದಲ್ಲಿವೆ.
ನಾನು ನನ್ನ ವ್ಯಾಪಾರವನ್ನು ವಿಸ್ತರಿಸಲು ಬಯಸಿದೆ, ಆದರೆ ಸಾಕಷ್ಟು ಹಣವನ್ನು ಹೊಂದಿರಲಿಲ್ಲ. ಗ್ರಾಹಕರ ಬೇಡಿಕೆ ಹೆಚ್ಚಾಯಿತು, ಆದರೆ ನನ್ನಿಂದ ಅವುಗಳನ್ನು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ ನಾನು ಸಾಕಷ್ಟು ಬ್ರಾಂಡ್ ಸ್ಟಾಕ್ ಹೊಂದಿರದಿದ್ದುದರಿಂದ ಸ್ಪರ್ಧೆಯಲ್ಲಿ ಮುಳುಗಿಹೋಗುವ ಸ್ಥಿತಿ ಬಂತು. ನನ್ನ ವ್ಯವಹಾರವನ್ನು ವಿಸ್ತರಿಸಲು ನಾನು ಬಯಸಿದ್ದೆ. ಹೀಗಾಗಿ, ಸಾಲವನ್ನು ತೆಗೆದುಕೊಳ್ಳುವುದು ಮತ್ತು ಮುಂದಿನ ಹಂತಕ್ಕೆ ನನ್ನ ವ್ಯವಹಾರವನ್ನು ಕೊಂಡೊಯ್ಯಲು ಇದು ಸಮಯವಾಗಿತ್ತು.
ಈ ಕೆಳಗಿನಂತೆ ಹೂಡಿಕೆ ಮಾಡಲು ನಾನು ಬಯಸಿದ್ದೆ:
ಮಹಿಳೆಯರು, ಪುರುಷರು, ಮಕ್ಕಳ ಒಳಉಡುಪು ಮಾರಾಟ - 1-1.50 ಲಕ್ಷ
ಶ್ಯಾಂಪೂಗಳು, ಕಂಡಿಷನರುಗಳು, ಕ್ರೀಮುಗಳು, ಡಿಯೋ ಇತ್ಯಾದಿಗಳಂತಹ ಸೌಂದರ್ಯವರ್ಧಕ ವಸ್ತುಗಳು - 4-5 ಲಕ್ಷ
10 ಕೌಂಟರ್ ಸ್ಟಾಲುಗಳು - 4 ಲಕ್ಷ
10 ಆಹಾರ ಮಳಿಗೆಗಳು - 4 ಲಕ್ಷ
1 ಕಾಫಿ ಹಟ್ - 2.5 ಲಕ್ಷ
1 ಹಣ್ಣಿನ ಕೌಂಟರ್ - 3.5 ಲಕ್ಷ
1 ಬಿಯರ್ ಬಾರ್ ಕೌಂಟರ್ - 2 ಲಕ್ಷ
1 ಡಿಜೆ ಸೆಟಪ್ - 4.5 ಲಕ್ಷ
ಮದುವೆ, ಜನ್ಮದಿನದ ಪಾರ್ಟಿಗಳು ಮತ್ತು ಕಾರ್ಯಕ್ರಮಗಳಿಗಾಗಿ ಕೇಟರಿಂಗ್ ವ್ಯವಹಾರ. - 6-7 ಲಕ್ಷ
ನಾನು ರಿಂಗುಗಳು, ಬಳೆಗಳು, ಕಿವಿಯೋಲೆಗಳು ಮುಂತಾದ ಕೃತಕ ಆಭರಣಗಳಲ್ಲಿ ಹೂಡಿಕೆ ಮಾಡಲು ಬಯಸಿದ್ದೆ. ಈ ಎಲ್ಲ ಅಗತ್ಯಗಳನ್ನು ಪೂರೈಸಲು ಮಹೀಂದ್ರ ಫೈನಾನ್ಸ್ ಮುಂದೆ ಬಂದಿತು ಮತ್ತು ಭದ್ರತೆಯೊಂದಿಗೆ ವ್ಯವಹಾರ ಸಾಲವನ್ನು ನನಗೆ ನೀಡಿತು. ಇದರೊಂದಿಗೆ, ನನ್ನ ವ್ಯವಹಾರದಲ್ಲಿ, ನನ್ನ ಮಾರಾಟದಲ್ಲಿ ನಾನು ಸುಧಾರಣೆ ಕಂಡೆ - ಮೊದಲು ಇದ್ದ ಅಂದಾಜು ವರ್ಷಕ್ಕೆ 36 ಲಕ್ಷದಿಂದ ಅಂದಾಜು - 45 ಲಕ್ಷಕ್ಕೆ ಇದು ಏರಿಕೆ ಕಂಡಿತು (ವ್ಯಾಪಾರಗಳು - ಸೌಂದರ್ಯವರ್ಧಕಗಳು ಮತ್ತು ಅಡುಗೆ). ನಾನು ಬಾಡಿಗೆ ಅಂಗಡಿಯಿಂದ ಹೊರಬಂದೆ, ನನ್ನ ಸ್ವಂತ ಅಂಗಡಿಯನ್ನು ಖರೀದಿಸಿ ಅದರಲ್ಲಿ ಸ್ಟಾಕ್ ಇಟ್ಟೆ. ಇತ್ತೀಚಿನ ಪ್ರವೃತ್ತಿಗಳ ಪ್ರಕಾರ ಪೀಠೋಪಕರಣ ಮತ್ತು ವಿನ್ಯಾಸಗಳನ್ನು ನಾನು ಸೇರಿಸಿದೆ. ನಾನು ಹೊಸ ಗ್ರಾಹಕರನ್ನು ಆಕರ್ಷಿಸಿದೆ - ಹೀಗೆ, ಸ್ಪರ್ಧಿಗಳಿಗಿಂತ ಮೇಲಕ್ಕೇರಿದೆ.
ನನ್ನ ಗಳಿಕೆ ಮತ್ತು ಸಮಾಜದಲ್ಲಿ ನನ್ನ ಗೌರವ ಗಣನೀಯವಾಗಿ ಹೆಚ್ಚಾಗಿದೆ. ಇಂದು ನಾನು ನನ್ನ ಬಗ್ಗೆ ಹೆಚ್ಚು ವಿಶ್ವಾಸ ಹೊಂದಿದ್ದೇನೆ. ನನ್ನ ಭವಿಷ್ಯದ ಯೋಜನೆ, ಸೌಂದರ್ಯವರ್ಧಕ ವ್ಯವಹಾರದ ರಿಟೇಲ್ ಮಾರಾಟದಿಂದ ಹರಿಯಾಣದ ಇತರ ಪ್ರದೇಶಗಳಿಗೆ ಸಗಟು ವ್ಯಾಪಾರದ ರೂಪದಲ್ಲಿ ನನ್ನ ವ್ಯಾಪ್ತಿಯನ್ನು ಹೆಚ್ಚಿಸುವುದು. ನನ್ನ ಸ್ವಂತ ಪ್ರದೇಶದಲ್ಲಿ ನನಗೆ ಬೆಳೆಯಲು ಸಹಾಯ ಮಾಡಿದ್ದಕ್ಕಾಗಿ ನಾನು ಮಹೀಂದ್ರ ಫೈನಾನ್ಸ್ ಅವರಿಗೆ ಕೃತಜ್ಞನಾಗಿದ್ದೇನೆ.”
“ನಾನು ಪದವೀಧರ ಮತ್ತು ನನ್ನ ಹೆಂಡತಿ, ಪೋಷಕರು ಮತ್ತು 2 ಮಕ್ಕಳೊಂದಿಗೆ ಗುರಗಾಂವ್ ನಲ್ಲಿರುವ ನನ್ನ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದೇನೆ. ಮೊದಲಿಗೆ, ನಾನು 2010ರಲ್ಲಿ ಎಸ್. ಡಿ ಎಂಜಿನಿಯರಿಂಗ್ ಎಂಬ ಪಾಲುದಾರಿಕೆ ಸಂಸ್ಥೆಯನ್ನು ಶ್ರೀ ತಜಿಂದರ್ ಸಿಂಗ್ ಅವರೊಂದಿಗೆ ಪ್ರಾರಂಭಿಸಿದೆ. ಆದರೆ ಕೆಲವು ವಿವಾದಗಳ ಕಾರಣದಿಂದ ಫೆಬ್ರವರಿ 2014ರಲ್ಲಿ ನಾವು ಅದನ್ನು ಮುಚ್ಚಬೇಕಾಯಿತು.
ಶೀಘ್ರದಲ್ಲೇ ನಾನು ನನ್ನ ಸ್ವಂತ ಮಾಲೀಕತ್ವದ ಸಂಸ್ಥೆ ದಾಗರ್ ವಾಹನ ಬಿಡಿಭಾಗಗಳ ಸಂಸ್ಥೆ ಪ್ರಾರಂಭಿಸಿದೆ. ಮಾರುತಿ ಮತ್ತು ಹೀರೋನ ಪೂರಕ ಶ್ರೇಣಿ 2ರ ಮಾರಾಟಗಾರರೊಡನೆ ನಾವು ವ್ಯವಹರಿಸುತ್ತೇವೆ. ನಾನು ಹಿಂದಿನ ಸಂಸ್ಥೆಯ ಆಸ್ತಿಗಳನ್ನು ಖರೀದಿಸಿ ಈ ಸಂಸ್ಥೆಯಲ್ಲಿ ಹೂಡಿದೆ. ಮಹೀಂದ್ರ ಫೈನಾನ್ಸ್ ಸಂಸ್ಥೆಯಿಂದ ಸಾಲ ಪಡೆದಿರುವ ನಮ್ಮ ಸ್ವಂತ ಕಾರ್ಖಾನೆಯನ್ನು ಭಿವಂಡಿಯಲ್ಲಿ ಪ್ರಾರಂಭಿಸಿದೆವು. ಮೊದಲಿಗೆ, ನಾನು ಕೆಲಸ ಹೊರಗುತ್ತಿಗೆ ಮಾಡುತ್ತಿದ್ದೆ, ಆದರೆ ಗ್ರಾಹಕರ ಕೆಲಸ ನಿರೀಕ್ಷೆಗಳನ್ನು ಪೂರೈಸಲು ನನಗೆ ಸಾಧ್ಯವಾಗಲಿಲ್ಲ. ನಾನು ಅಗತ್ಯವಾದ ವಸ್ತುಗಳನ್ನು ಮತ್ತು ಯಂತ್ರಗಳನ್ನು ಹೊಂದಿರದೇ ಇದ್ದುದು ಇದಕ್ಕೆ ಕಾರಣವಾಗಿತ್ತು.
ನನಗೆ ಸಾಲ ಬೇಕಿತ್ತು ಮತ್ತು ನಾನು ಮಹೀಂದ್ರ ಫೈನಾನ್ಸ್ ಗೆ ಹೋದೆ. 2014ರಲ್ಲಿ, ಅವರು ನನಗೆ 2 ಸಿಎನ್‌ಸಿಗೆ ಹಣ ನೀಡಿದರು. ಹಿಂದೆ, ನನ್ನ ವಹಿವಾಟು ಸುಮಾರು 30 ಲಕ್ಷ ಆಗಿತ್ತು. ಸಾಲ ತೆಗೆದುಕೊಂಡಿದ್ದು ನನಗೆ ಬಹಳಷ್ಟು ಸಹಾಯ ಮಾಡಿತು - ನನ್ನಲ್ಲಿ 21 ಇತ್ತೀಚಿನ ಯಂತ್ರಗಳಿವೆ ಮತ್ತು ನನ್ನ ಅಸ್ತಿತ್ವದಲ್ಲಿರುವ ಗ್ರಾಹಕರ ಬೇಡಿಕೆಗಳನ್ನು ಪೂರೈಸಬಹುದು. ನಾನು ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಜಯಿಸಿದೆ ಮತ್ತು ನನ್ನ ಮಾರಾಟ ಮತ್ತು ಲಾಭದಲ್ಲಿ ಸುಧಾರಣೆಯಾಗಿದೆ. ನನ್ನ ವ್ಯಾಪಾರವನ್ನು ಹತ್ತಿರದ ಪ್ರದೇಶಗಳಿಗೆ ವಿಸ್ತರಿಸಲಾಗಿದೆ.
ನನ್ನ ಭವಿಷ್ಯದ ಯೋಜನೆಗಳೆಂದರೆ ಫೋರ್ಜಿಂಗ್ ಯೋಜನೆ ಸೇರಿಸುವುದು ಗ್ರಾಹಕರ ಮತ್ತು ಯಂತ್ರೋಪಕರಣಗಳ ವಿಷಯದಲ್ಲಿ ವ್ಯವಹಾರವನ್ನು ವಿಸ್ತರಿಸುವುದು. ನನ್ನ ಮೊದಲ ಸಾಲವನ್ನು ತೆಗೆದುಕೊಂಡ ನಂತರ ನನ್ನ ಸ್ಥಿತಿ ಬಹಳಷ್ಟು ಉತ್ತಮವಾಗಿದೆ. ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ನಾನು ಯಾವಾಗಲೂ ಮಹೀಂದ್ರ ಫೈನಾನ್ಸ್ ಅನ್ನು ಸಲಹೆ ಮಾಡುತ್ತೇನೆ!"
Email: [email protected]
Toll free number: 1800 233 1234(ಸೋಮವಾರ-ಭಾನುವಾರ, ಬೆಳಗ್ಗೆ 8 ರಿಂದ ರಾತ್ರಿ 10 ರವರೆಗೆ)
(Except National Holidays)
WhatsApp number: 7066331234
ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್ ಶಾಖೆಯನ್ನು ಕಂಡುಕೊಳ್ಳಿ
For illustration purpose only
Total Amount Payable
50000
ನಾನು 5 ವರ್ಷದಿಂದ ಮಹಿಂದ್ರಾ ಫೈನಾನ್ಸ್ ನೊಂದಿಗೆ ಸೇರಿಕೊಂಡಿದ್ದೇನೆ. ನಾನು 2013ರಲ್ಲಿ ಮಹಿಂದ್ರಾ ಫೈನಾನ್ಸ್ ನಿಂದ ಲೋನ್ ಪಡೆದುಕೊಂಡಿದ್ದೇನೆ, ಬೇರೆ ಬ್ಯಾಂಕಿನ ತುಲನೆಯಲ್ಲಿ ಇದು ನನಗೆ ತುಂಬಾ ಅನುಕೂಲಕರವಾಗಿತ್ತು. ಡ್ಯಾಕ್ಟೂಮೆಂಟೇಶನ್ ತುಂಬಾ ಕಡಿಮೆಯಾಗಿತ್ತು ಹಾಗೂ ವಿತರಣೆ ತುಂಬಾ ಫಾಸ್ಟ್ ಆಗಿತ್ತು. ಅದಲ್ಲದೆ ಒಂದು ವೇಳೆ ನಾನು ಇ ಎಮ್ ಐ ಕಟ್ಟಲು ಹೋಗಲಾಗದಿದ್ದರೆ, ಇ ಎಮ್ ಐ ಒಟ್ಟು ಮಾಡಲು ಅವರು ತಮ್ಮ ಒಬ್ಬ ಎಕ್ಸಿಕ್ಯುಟಿವನ್ನು ಕಳುಹಿಸುತ್ತಾರೆ. ಇಲ್ಲಿಯ ಸ್ಟಾಪ್ ವ್ಯವಹಾರ ಮಾಡುವಲ್ಲಿ ಮಿತ್ರತ್ವದಲ್ಲಿರುತ್ತಾರೆ. ಈ ಎಲ್ಲಾ ಕಾರಣಗಳಿಂದಾಗಿ ನಾನು 2016 ರಲ್ಲಿ ಪುನಃ ಒಂದು ಲೋನ್ ತೆಗೆದುಕೊಂಡೆ. ನಾನು ತೆಗೆದುಕೊಂಡ ಎರಡೂ ಸಾಲಗಳನ್ನು ಹಿಂತಿರಿಗಿಸಿದ್ದೇನೆ ಮತ್ತು ಈಗ ನಾನು ಮೂರನೇ ಸಲ ಸಾಲ ತೆಗೆದುಕೊಳ್ಳುವ ಯೋಜನೆ ಮಾಡುತ್ತಿದ್ದೇನೆ.